ಟೋಕಿಯೋ(ನ.13): ಜಪಾನ್‌ನಲ್ಲಿ ಆಯೋಜಿಸಿದ್ದ ಪ್ರಿನ್ಸೆಸ್ ಏಕಿಡೆನ್ ರೇಸ್‌ನಲ್ಲಿ ಮನ ಮಿಡಿಯುವ ಘಟನೆ ನಡೆದಿದೆ. ರಿಲೆ ರೇಸ್‌ನಲ್ಲಿ ಜಪಾನ್ 19 ವರ್ಷದ ರಿ ಇಡಾ ಸ್ಪರ್ಧಿ ಓಟದದ ವೇಳೆ ಕಾಲು ಮುರಿದು ಟ್ರ್ಯಾಕ್‌ನಲ್ಲೇ ಕುಸಿದು ಬಿದ್ದಳು. ಆದರೆ ಸ್ಪರ್ಧೆಯಿಂದ ಹಿಂದೆ ಸರಿಯದ ರಿ ಇಡಾ ಅಂಬೆಗಾಲಿಡುತ್ತಾ ಸಹ ಸ್ಪರ್ಧಿಗೆ ರಿಲೆ ಫ್ಲ್ಯಾಗ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.

ರಿ ಇಡಾ 3.5 ಮೀಟರ್ ಓಟ ಮುಗಿಸುವ ವೇಳೆ ಸ್ಲಿಪ್ ಆಗಿ ಕಾಲು ಮುರಿದಿದೆ. ಅಲ್ಲೆ ಕುಸಿದು ಬಿದ್ದ ರಿ ಇಡಾ ಎದ್ದು ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ತನ್ನ ರಿಲೆ ಫ್ಲ್ಯಾಗ್‌ನ್ನ ತಂಡದ ಇತರ ಸ್ಪರ್ಧಿಗೆ ನೀಡಲು ಮೊಣಕಾಲಿನಲ್ಲೇ 200 ಮೀಟರ್ ದೂರ ಸಾಗಿದ್ದಾಳೆ. ಬಳಿಕ ತಂಡದ ಸಹ ಆಟಗಾರ್ತಿಗೆ ರಿಲೆ ಫ್ಲ್ಯಾಗ್ ನೀಡಿದ್ದಾಳೆ. ಈ ವೀಡಿಯೋ ಇದೀಗ ಭಾರಿ ವೈರಲ್ ಆಗಿದೆ.

 

 

ಕಾಲು ಮುರಿದು ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ಛಲ ಬಿಡದ ರಿ ಇಡಾ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾಳೆ. ಈಕೆಯ ಛಲಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.