ಮುಂಬೈ(ಅ.13): ಜಮ್ಮು ಮತ್ತು ಕಾಶ್ಮೀರದಿಂದ ಪರ್ವೇಜ್ ರಸೂಲ್ ಈಗಾಗಲೇ ಐಪಿಎಲ್ ಟೂರ್ನಿ ಆಡಿದ್ದಾರೆ. ಮನ್ಜೂರ್ ದಾರ್ ಕಳೆದ ವರ್ಷ ಐಪಿಎಲ್‌ಗೆ ಕಾಲಿಟ್ಟಿದದ್ದರು.  ಇದೀಗ ಈ ಕಣಿವೆ ರಾಜ್ಯದಿಂದ ಮತ್ತೊಬ್ಬ ಯುವ ಕ್ರಿಕೆಟಿಗ ಐಪಿಎಲ್ ಆಡಲು ಸಜ್ಜಾಗಿದ್ದಾರೆ.  

ಮುಂಬೈ ಇಂಡಿಯನ್ಸ್ ತಂಡ ಮುಂದಿನ ವರ್ಷದ ಐಪಿಎಲ್ ಟೂರ್ನಿಗಾಗಿ ಟ್ರಯಲ್ಸ್ ಕ್ಯಾಂಪ್ ಆರಂಭಿಸಿದೆ. ಇದಕ್ಕಾಗಿ ಜಮ್ಮು ಕಾಶ್ಮೀರದ 17 ವರ್ಷದ  ಯುವ ವೇಗಿ ರಸಿಕ್ ಸಲಾಮ್‌ಗೆ ಅವಕಾಶ ನೀಡಿದೆ.

ವಿಜಯ್ ಹಜಾರೆ ಟೂರ್ನಿಯ 2 ಪಂದ್ಯದಿಂದ 3 ವಿಕೆಟ್ ಕಬಳಿಸಿದ ರಸಿಕ್ ಅದ್ಬುತ ಬೌಲಿಂಗ್ ಮೂಲಕ ಗಮನಸೆಳೆದಿದ್ದರು. ಇದೀಗ ಈ ಯುವ ವೇಗಿ ಮುಂಬೈ ಇಂಡಿಯನ್ಸ್ ಟ್ರೈಯಲ್ಸ್ ಕ್ಯಾಂಪ್‌ನಲ್ಲಿ ಭಾಗವಹಿಸಲು ಅವಕಾಶ ಮಾಡಿದೆ.

ಟ್ಯಾಲೆಂಟ್ ಹಂಟ್ ಕ್ಯಾಂಪ್‌ ಮೂಲಕ ಟೀಂ ಇಂಡಿಯಾ ವೇಗಿ ಇರ್ಫಾನ್ ಪಠಾಣ್ ಈ ಯುವ ವೇಗಿ ರಸಿಕ್ ಸಲಾಮ್ ಅವರನ್ನ ಗುರುತಿಸಿದ್ದರು. ಇದೀಗ ಈ ಯುವ ವೇಗಿಗೆ ಅತ್ಯುತ್ತಮ ಅವಕಾಶ ಒದಗಿ ಬಂದಿದೆ.