ಲಂಡನ್(ಆ.07): ಭಾರತ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 31 ರನ್ ಗಳ ಗೆಲುವು ಸಾಧಿಸಿದ ಬಳಿಕ, ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆ್ಯಂಡರ್‌ಸನ್ ಕೆಲ ಸಹ ಆಟಗಾರರೊಂದಿಗೆ ಗಾಲ್ಫ್ ಕೋರ್ಸ್‌ನಲ್ಲಿ ಮೋಜಿನಲ್ಲಿ ತೊಡಗಿದ್ದಾಗ ಎಡವಟ್ಟವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಆ್ಯಂಡರ್‌ಸನ್ ಪ್ರಮುಖ 4 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ನೆರವಾಗಿದದ್ದರು. ಈ ಗೆಲುವಿ ಬಳಿಕ  ಗಾಲ್ಫ್ ಆಡಲು ಹೋದ ಆ್ಯಂಡರ್‌ಸನ್ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ.

 

 

A) @jimmya9 is perfectly fine. B) 😂😂😂😂😂😂😂😂😂

A post shared by Stuart Broad (@stuartbroad8) on Aug 5, 2018 at 9:18am PDT

 

ಬಲವಾಗಿ ಬಾರಿಸಿದ ಚೆಂಡು ಮರದ ತುಂಡಿಗೆ ತಾಕಿ ಚಿಮ್ಮಿದ್ದು, ಆ್ಯಂಡರ್‌ಸನ್ ಮುಖಕ್ಕೆ ಬಡಿದಿದೆ. ಇದರಿಂದ ಅವರ ದವಡೆಗೆ ಬಲವಾದ ಪೆಟ್ಟು ಬಿದ್ದಿದೆ. ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ಹಾಗೂ ಟ್ವೀಟರ್‌ನಲ್ಲಿ ಹಾಕಿದ್ದು, ‘ಜಿಮ್ಮಿಗೆ ಏನು ಆಗಿಲ್ಲ, ಭಯವಿಲ್ಲ’ ಎಂದು ಬರೆದಿದ್ದಾರೆ. 

ನೋವಿದ್ದರೂ, ಆ.9ರಿಂದ ಆರಂಭಗೊಳ್ಳಲಿರುವ ಭಾರತ ವಿರುದ್ಧ 2ನೇ ಟೆಸ್ಟ್‌ನಲ್ಲಿ ಆ್ಯಂಡರ್‌ಸನ್ ಆಡಲಿದ್ದಾರೆ ಎನ್ನಲಾಗಿದೆ. ಸದ್ಯ ಆ್ಯಂಡರ್‌ಸನ್ ಗಾಯದಿಂದ  ಚೇತರಿಸಿಕೊಂಡಿದ್ದು, ಟೆಸ್ಟ್ ಪಂದ್ಯದ ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ.