ಸಿಡ್ನಿ(ಜು.19): ಕ್ರಿಕೆಟ್‌ಗೆ ಹೊಸ ರೂಪ ನೀಡಿದ ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿ ವಿಶ್ವದ ಇತರ ಕ್ರಿಕೆಟ್ ಲೀಗ್ ಟೂರ್ನಿಗಳಿಗೆ ಮಾದರಿಯಾಗಿದೆ. ಐಪಿಎಲ್ ಟೂರ್ನಿ ಬಳಿಕ ಆಸ್ಟ್ರೇಲಿಯಾ, ವೆಸ್ಟ್ಇಂಡೀಸ್, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು ತಮ್ಮದೇ ಆದ ಲೀಗ್ ಟೂರ್ನಿ ಆರಂಭಿಸಿವೆ.

ಐಪಿಎಲ್ ಟೂರ್ನಿ ಬಳಿಕ ಹೆಚ್ಚು ಜನಪ್ರೀಯವಾಗಿರೋ ಮತ್ತೊಂದು ಟೂರ್ನಿ ಎಂದರೆ ಅದು ಆಸ್ಟ್ರ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿ. 2011-12ರಲ್ಲಿ ಆರಂಭವಾದ ಬಿಗ್ ಬ್ಯಾಶ್ ಲೀಗ್ ಟೂರ್ನಿ ಇದೀಗ 7 ಆವೃತ್ತಿಗಳನ್ನ ಪೂರೈಸಿ 8 ಆವೃತ್ತಿಗೆ ಸಜ್ಜಾಗುತ್ತಿದೆ.

ಬರೋಬ್ಬರಿ 7 ಆವೃತ್ತಿಗಳ ಬಳಿಕ 8ನೇ ಆವೃತ್ತಿಗೆ ಐಪಿಎಲ್ ಮಾದರಿ ಅನುಸರಿಸಲು ಬಿಬಿಎಲ್ ನಿರ್ಧರಿಸಿದೆ. ಐಪಿಎಲ್ ಟೂರ್ನಿಯಲ್ಲಿನ ಲೀಗ್ ಪಂದ್ಯಗಳಲ್ಲಿ ಪ್ರತಿ ತಂಡದ ವಿರುದ್ಧ ತವರು ಹಾಗೂ ತವರಿನಾಚೆ ಪಂದ್ಯಗಳನ್ನಾಡಲಿದೆ. ಇದೀಗ ಬಿಗ್ ಬ್ಯಾಶ್ ಕೂಡ ಇದೇ ವೇಳಾಪಟ್ಟಿ ಅನುಸರಿಸಲು ನಿರ್ಧರಿಸಿದೆ.

ನೂತನ ಆವೃತ್ತಿಯಲ್ಲಿ ಬಿಬಿಎಲ್ ಟೂರ್ನಿಯಲ್ಲಿ ಓಟ್ಟು 56 ಲೀಗ್ ಪಂದ್ಯಗಳು ನಡೆಯಲಿದೆ. ಹೀಗಾಗಿ 48 ದಿನಗಳಲ್ಲಿ ಮುಕ್ತಾಯವಾಗುತ್ತಿದ್ದ ಬಿಬಿಎಲ್ ಟೂರ್ನಿ ಇದೀಗ ಐಪಿಎಲ್ ರೀತಿಯಲ್ಲೇ  61 ದಿನ ನಡೆಯಲಿದೆ. ಈ ಮೂಲಕ ಐಪಿಎಲ್ ಟೂರ್ನಿಯ ರೀತಿಯಲ್ಲೇ ಬಿಗ್ ಬ್ಯಾಶ್ ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.