ನವದೆಹಲಿ(ನ.03): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ದಿಢೀರ್ ಗುಡ್ ಬೈ ಹೇಳಿದ್ದಾರೆ. 2016 ರಿಂದ 2018ರ ವರೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮೆಂಟರ್ ಜವಾಬ್ದಾರಿ ನಿರ್ವಹಿಸಿದ ಸೆಹ್ವಾಗ್, ಇದೀಗ ಪ್ರೀತಿ ಜಿಂಟಾ ಮಾಲೀಕತ್ವದ ಫ್ರಾಂಚೈಸಿಯಿಂದ ಹೊರಬಂದಿದ್ದಾರೆ.

ಸುದೀರ್ಘ 5 ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜೊತೆ ಗುರುತಿಸಿಕೊಂಡಿದ್ದ ಸೆಹ್ವಾಗ್ ಇದೀಗ ದಿಢೀರ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಿಂದ ಹೊರಬಂದಿದ್ದಾರೆ. ತಮ್ಮ ನಿರ್ಧಾರವನ್ನ  ಸೆಹ್ವಾಗ್ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ, ನ್ಯೂಜಿಲೆಂಡ್ ಕೋಚ್ ಮೈಕ್ ಹೆಸನ್ ಅವರನ್ನ ಮುಖ್ಯ ಕೋಚ್ ಆಗಿ ನೇಮಿಸಿದೆ. ಇದರ ಬೆನ್ನಲ್ಲೇ, ಸೆಹ್ವಾಗ್ ಗುಡ್’ಬೈ ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ ಜೊತೆ ವೈಮನಸ್ಸು ಎರ್ಪಟ್ಟಿತ್ತು ಅನ್ನೋ ಮಾತುಗಳು ಕೇಳಿಬಂದಿತ್ತು.