Asianet Suvarna News Asianet Suvarna News

ಇದು ಸಾರ್ವಕಾಲಿಕ ಐಪಿಎಲ್ ಕ್ಯಾಪ್ಟನ್ಸ್’ಗಳ ತಂಡ..!

ಐಪಿಎಲ್ ಹೊಸ ಹೊಸ ನಾಯಕರುಗಳನ್ನು ಹುಟ್ಟುಹಾಕಿದೆ. ತಂಡದ ಯಶಸ್ಸು ಕೇವಲ ವೈಯುಕ್ತಿಕ ಆಟಗಾರನ ಪ್ರದರ್ಶನಕ್ಕೆ ಸೀಮಿತವಾಗಿರದೇ ನಾಯಕನ ತಂತ್ರಗಾರಿಕೆಯೂ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

IPL This is All time Captains XI

ಬೆಂಗಳೂರು[ಜು.29]: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್[ಐಪಿಎಲ್] 11 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ಐಪಿಎಲ್ ಹೊಸ ಹೊಸ ನಾಯಕರುಗಳನ್ನು ಹುಟ್ಟುಹಾಕಿದೆ. ತಂಡದ ಯಶಸ್ಸು ಕೇವಲ ವೈಯುಕ್ತಿಕ ಆಟಗಾರನ ಪ್ರದರ್ಶನಕ್ಕೆ ಸೀಮಿತವಾಗಿರದೇ ನಾಯಕನ ತಂತ್ರಗಾರಿಕೆಯೂ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮೊದಲೆರಡು ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಶೇನ್ ವಾರ್ನ್ ಹಾಗೂ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಆ್ಯಡಂ ಗಿಲ್’ಕ್ರಿಸ್ಟ್’ವನ್ನು ಚಾಂಪಿಯನ್ಸ್ ಪಟ್ಟಕ್ಕೇರಿಸಿದ್ದರು. ಸಿಎಸ್’ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಲಾ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೆಕೆಆರ್ 2, ಸನ್’ರೈಸರ್ಸ್ ಹೈದರಾಬಾದ್ ಒಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿವೆ.
ನಾವು ಆಯ್ಕೆ ಮಾಡಿದ ಕ್ಯಾಪ್ಟನ್ಸ್’ಗಳನ್ನೊಳಗೊಂಡ ಐಪಿಎಲ್ ತಂಡ ಹೀಗಿದೆ..

#1. ಡೇವಿಡ್ ವಾರ್ನರ್:
ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್. 2009ರಲ್ಲಿ ಸಿಎಸ್’ಕೆ ತಂಡದಲ್ಲಿ ಸ್ಥಾನ ಪಡೆದಿದ್ದ ವಾರ್ನರ್, ಆ ಬಳಿಕ ಡೆಲ್ಲಿ ಡೇರ್’ಡೆವಿಲ್ಸ್ ತಂಡವನ್ನು ಕೂಡಿಕೊಂಡಿದ್ದರು. 2014ರಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡ ವಾರ್ನರ್ 2015ರಲ್ಲಿ ತಂಡದ ನಾಯಕರಾಗಿ ನೇಮಕಗೊಂಡರು. 
ಇನ್ನು 2016ರಲ್ಲಿ ನಾಯಕನ ಆಟವಾಡುವುದರೊಂದಿಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು. ವಾರ್ನರ್ ಆಡಿದ 17 ಪಂದ್ಯಗಳಲ್ಲಿ 848 ರನ್ ಸಿಡಿಸಿದ್ದರು. ಇನ್ನು 2017ರ ಆವೃತ್ತಿಯಲ್ಲೂ ಗರಿಷ್ಠ ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆಯುವಲ್ಲಿ ಸಫಲವಾಗಿದ್ದರು. 2018ರಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗಾಗಿ ಐಪಿಎಲ್ ಆಡುವ ಅವಕಾಶದಿಂದ ವಂಚಿತರಾದರು.    
ವಾರ್ನರ್ ನಾಯಕಕತ್ವದಲ್ಲಿ ಹೈದರಾಬಾದ್ ತಂಡ 47 ಪಂದ್ಯಗಳನ್ನಾಡಿದ್ದು 25 ಗೆಲುವು, 22 ಸೋಲು ಕಂಡಿದ್ದು ಗೆಲುವಿನ ಸರಾಸರಿ 57% ಆಗಿದೆ.

#2. ಗೌತಮ್ ಗಂಭೀರ್:
ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಗೌತಮ್ ಗಂಭೀರ್ ಎರಡು ಪ್ರಾಂಚೈಸಿ ಪರ ಐಪಿಎಲ್ ಆಡಿದ್ದಾರೆ. 2008ರಿಂದ 2010ರವರೆಗೆ ತವರು ತಂಡ ಡೆಲ್ಲಿ ಡೇರ್’ಡೆವಿಲ್ಸ್ ತಂಡದ ಪರ ಕಣಕ್ಕಿಳಿದಿದ್ದ ಗಂಭೀರ್, ಆ ಬಳಿಕ 2011ರಲ್ಲಿ ಕೋಲ್ಕತಾ ನೈಟ್’ರೈಡರ್ಸ್ ತಂಡವನ್ನು ಸೇರಿಕೊಂಡ ಗಂಭೀರ್ 2011ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಮತ್ತೆ 2014ರಲ್ಲಿ ಮತ್ತೊಮ್ಮೆ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.
ಗಂಭೀರ್ ನಾಯಕನಾಗಿ 129 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 71 ಗೆಲುವು, 57 ಸೋಲು ಕಂಡಿದ್ದು, ಗೆಲುವಿನ ಸರಾಸರಿ 55.03 ಆಗಿದೆ.

#3. ಗೌತಮ್ ಗಂಭೀರ್:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2008ರಲ್ಲಿ ಕೋಲ್ಕತಾ ನೈಟ್’ರೈಡರ್ಸ್ ವಿರುದ್ಧ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದರು. ಆರ್’ಸಿಬಿ ಪರ ಸತತ 11 ಆವೃತ್ತಿಗಳಲ್ಲಿ ಕಣಕ್ಕಿಳಿಯುವ ಮೂಲಕ ಏಕೈಕ ಪ್ರಾಂಚೈಸಿಯೊಂದಿಗೆ 11 ಆವೃತ್ತಿಯಾಡಿದ ಏಕೈಕ ಕ್ರಿಕೆಟಿಗನೆಂದರೆ ಅದು ವಿರಾಟ್ ಕೊಹ್ಲಿ. 2011ರಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ನಾಯಕನಾಗಿ ಆಯ್ಕೆಯಾದ ಕೊಹ್ಲಿ ಇದುವರೆಗೂ ಐಪಿಎಲ್’ನಲ್ಲಿ 163 ಪಂದ್ಯಗಳನ್ನಾಡಿ 4948 ರನ್ ಸಿಡಿಸಿದ್ದಾರೆ. ಆದರೆ ಕೊಹ್ಲಿ ಒಮ್ಮೆಯೂ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಸಫಲವಾಗಿಲ್ಲ. ಕೊಹ್ಲಿ ಮುಂದಿನ ಗುರಿ ಆರ್’ಸಿಬಿ ತಂಡವನ್ನು ಶತಾಯಗತಾಯ ಚಾಂಪಿಯನ್ ಪಟ್ಟಕ್ಕೇರಿಸುವುದಾಗಿದೆ.  
ಕೊಹ್ಲಿ ನಾಯಕತ್ವದಲ್ಲಿ ಆರ್’ಸಿಬಿ 96 ಪಂದ್ಯಗಳನ್ನಾಡಿದ್ದು, 44 ಗೆಲುವು, 47 ಸೋಲು, 2 ಟೈ ಹಾಗೂ 3 ಪಂದ್ಯಗಳಲ್ಲಿ ಫಲಿತಾಂಶವಿಲ್ಲ. ಒಟ್ಟಾರೆ ಗೆಲುವಿನ ಸರಾಸರಿ 45.83

#4 ರೋಹಿತ್ ಶರ್ಮಾ:
ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಡೆಕ್ಕನ್ ಚಾರ್ಜರ್ಸ್ ತಂಡದ ಮೂಲಕ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದರು. 2011ರ ಆಟಗಾರರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡ ರೋಹಿತ್ 2013ರಲ್ಲಿ ತಂಡದ ನಾಯಕರಾಗಿ ಆಯ್ಕೆಯಾದರು. ನಾಯಕನಾದ ಹುರುಪಿನಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಶರ್ಮಾ ಯಶಸ್ವಿಯಾದರು. 2014ರಲ್ಲಿ ತಂಡ ಪ್ಲೇ ಆಫ್ ಹಂತಕ್ಕೇರಿತು. ಅದಾದ ಬಳಿಕ 2015 ಹಾಗೂ 2017ರಲ್ಲಿ ರೋಹಿತ್ ಮತ್ತೆರಡು ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಪಟ್ಟಕ್ಕೇರಿಸಿದರು. ಈ ಮೂಲಕ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 89 ಬಾರಿ ಮುನ್ನಡೆಸಿದ್ದು, 51 ಗೆಲುವು, 37 ಸೋಲು ಹಾಗೂ 1 ಪಂದ್ಯದ ಫಲಿತಾಂಶ ಹೊರಬಂದಿಲ್ಲ. ಒಟ್ಟಾರೆ ಗೆಲುವಿನ ಸರಾಸರಿ 57.31

#5. ಯುವರಾಜ್ ಸಿಂಗ್
ಟೀಂ ಇಂಡಿಯಾದ ಅನುಭವಿ ಆಲ್ರೌಂಡರ್ ಯುವರಾಜ್ ಸಿಂಗ್ ಇದುವರೆಗೂ 5 ವಿವಿಧ ಪ್ರಾಂಚೈಸಿಗಳ ಪರ ಕ್ರಿಕೆಟ್ ಆಡಿದ್ದಾರೆ. ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವುದರೊಂದಿಗೆ ತಂಡವನ್ನು ಪ್ಲೇ ಆಫ್ ಹಂತಕ್ಕೇರಿಸಿದ್ದರು. ಆ ಬಳಿಕ ಪುಣೆ ವಾರಿಯರ್ಸ್ ಇಂಡಿಯಾ ತಂಡದ ಪರ ಕೆಲ ಪಂದ್ಯಗಳಿಗೆ ನಾಯಕರಾಗಿದ್ದರು. ಆದರೆ ಯುವಿ ನಾಯಕತ್ವದಲ್ಲಿ ತಂಡವನ್ನು ಒಮ್ಮೆಯೂ ಪ್ರಶಸ್ತಿ ಸುತ್ತಿಗೇರಿಸುವಲ್ಲಿ ಸಫಲವಾಗಲಿಲ್ಲ. 2014ರ ಆಟಗಾರರ ಹರಾಜಿನಲ್ಲಿ ಆರ್’ಸಿಬಿ ಯುವಿಯನ್ನು 14 ಕೋಟಿ ನೀಡಿ ಖರೀದಿಸಿತ್ತು.
ಯುವಿ ಒಟ್ಟು 43 ಬಾರಿ ತಂಡಗಳನ್ನು ಮುನ್ನಡೆಸಿದ್ದು, ತಂಡ ತಲಾ 21 ಸೋಲು-ಗೆಲುವುಗಳನ್ನು ಕಂಡಿದೆ. 1 ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಗೆಲುವಿನ ಸರಾಸರಿ 48.83

#6. ಶೇನ್ ವಾಟ್ಸನ್:
ಆಸ್ಟ್ರೇಲಿಯಾ ಕಂಡ ಶ್ರೇಷ್ಠ ಆಲ್ರೌಂಡರ್’ಗಳ ಪೈಕಿ ಶೇನ್ ವಾಟ್ಸನ್ ಕೂಡಾ ಒಬ್ಬರು. ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. 2015ರ ಆವೃತ್ತಿಯಲ್ಲಿ ಶೇನ್ ವಾಟ್ಸನ್ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೆಮಿಫೈನಲ್ಸ್ ಹಂತಕ್ಕೇರಿತ್ತು. ಮೂರು ಪಂದ್ಯಗಳ ಮಟ್ಟಿಗೆ ಆರ್’ಸಿಬಿ ತಂಡವನ್ನು ವಾಟ್ಸನ್ ಮುನ್ನಡೆಸಿದ್ದರು
ವಾಟ್ಸನ್ ಒಟ್ಟು 24 ಪಂದ್ಯಗಳಲ್ಲಿ ನಾಯಕರಾಗಿದ್ದು, 8 ಗೆಲುವು, 13 ಸೋಲುಗಳನ್ನು ಕಂಡಿದೆ. ಇನ್ನು 2 ಪಂದ್ಯ ಟೈ ಆಗಿದ್ದು, ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಗೆಲುವಿನ ಸರಾಸರಿ 39.13

#7. ಎಂ.ಎಸ್ ಧೋನಿ:
ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ವಿಚಾರದಲ್ಲಿ ನಂ.1 ನಾಯಕ ಎಂದರೆ ಅತಿಶಯೋಕ್ತಿಯಾಗಲಾರದು. ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು 2010, 2011 ಹಾಗೂ 2018ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಹಂತ ಪ್ರವೇಶಿಸಿದ ಏಕೈಕ ತಂಡ ಎನ್ನುವ ಕೀರ್ತಿಗೆ ಚೆನ್ನೈ ಸೂಪರ್’ಕಿಂಗ್ಸ್ ತಂಡ ಪಾತ್ರವಾಗಿದೆ. 
ನಾಯಕನಾಗಿ ಧೋನಿ 159 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು 94 ಗೆಲುವು, 64 ಸೋಲು ಹಾಗೂ ಒಂದು ಪಂದ್ಯದಲ್ಲಿ ಫಲಿತಾಂಶ ಹೊರಬಂದಿಲ್ಲ. ಒಟ್ಟಾರೆ ಗೆಲುವಿನ ಸರಾಸರಿ 59.11

#8. ಶಾನ್ ಪೊಲ್ಲಾಕ್
ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಲ್ರೌಂಡರ್ ಶಾನ್ ಪೊಲ್ಲಾಕ್ ಸಚಿನ್ ಹಾಗೂ ಹರ್ಭಜನ್ ಸಿಂಗ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. ಆಬಳಿಕ ಮುಂಬೈ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಪೊಲ್ಲಾಕ್ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ಸ್ ಲೀಗ್’ನಲ್ಲಿ ಜಯಭೇರಿ ಬಾರಿಸಿತ್ತು.
ಪೊಲ್ಲಾಕ್ 4 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದು, ಮೂರು ಪಂದ್ಯಗಳಲ್ಲಿ ಜಯ ಹಾಗೂ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಗೆಲುವಿನ ಸರಾಸರಿ 75%

#9. ಶೇನ್ ವಾರ್ನ್
ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಶೇನ್ ವಾರ್ನ್. ರಾಜಸ್ಥಾನ ರಾಯಲ್ಸ್ ತಂಡದಿಂದ ಸಾಕಷ್ಟು ಯುವ ಕ್ರಿಕೆಟಿಗರು ವಾರ್ನ್ ಮಾರ್ಗದರ್ಶನದಲ್ಲಿ ಬೆಳಕಿಗೆ ಬಂದರು.
ವಾರ್ನ್ ಒಟ್ಟು 55 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 30 ಗೆಲುವು 24 ಸೋಲು ಹಾಗೂ ಒಂದು ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. ಒಟ್ಟಾರೆ ಗೆಲುವಿನ ಸರಾಸರಿ 54.54

#10. ಅನಿಲ್ ಕುಂಬ್ಳೆ:
ಟೀಂ ಇಂಡಿಯಾ ಮಾಜಿ ಟೆಸ್ಟ್ ತಂಡದ ನಾಯಕ ಅನಿಲ್ ಕುಂಬ್ಳೆ 2008ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಐಪಿಎಲ್’ಗೆ ಪದಾರ್ಪಣೆ ಮಾಡಿದರು. 2009ರಲ್ಲಿ ಆರ್’ಸಿಬಿ ತಂಡದ ನಾಯಕರಾಗಿ ಆಯ್ಕೆಯಾದ ಕುಂಬ್ಳೆ ತಂಡವನ್ನು ಫೈನಲ್ ಹಂತಕ್ಕೆ ಕೊಂಡ್ಯೊಯ್ದಿದ್ದರು. ಕುಂಬ್ಳೆ ನಾಯಕತ್ವದಲ್ಲಿ ಆರ್’ಸಿಬಿ ಒಟ್ಟು 26 ಪಂದ್ಯಗಳನ್ನಾಡಿ 15 ಗೆಲುವು, 11 ಸೋಲು ಕಂಡಿದೆ. ಗೆಲುವಿನ ಸರಾಸರಿ 57.69

#11. ಜಹೀರ್ ಖಾನ್:
ಟೀಂ ಇಂಡಿಯಾ ಕಂಡ ಯಶಸ್ವಿ ವೇಗದ ಬೌಲರ್’ಗಳಲ್ಲಿ ಜಹೀರ್ ಖಾನ್ ಕೂಡಾ ಒಬ್ಬರು. ಆರ್’ಸಿಬಿ ಮೂಲಕ ಐಪಿಎಲ್’ಗೆ ಪದಾರ್ಪಣೆ ಮಾಡಿದ ಜ್ಯಾಕ್, ಆ ಬಳಿಕ ಮುಂಬೈ ಸೇರಿ ಅದನ್ನು ಬಿಟ್ಟು ಮತ್ತೆ ಬೆಂಗಳೂರು ಸೇರಿಕೊಂಡರು. 2015ರಲ್ಲಿ ಡೆಲ್ಲಿ ಡೇರ್’ಡೆವಿಲ್ಸ್ ತಂಡದ ನಾಯಕರಾಗಿ ಆಯ್ಕೆಯಾದ ಜಹೀರ್ ಖಾನ್ 23 ಪಂದ್ಯಗಳಲ್ಲಿ ತಂಡವನ್ನು ಮುನ್ನೆಡಿಸಿ 10 ಗೆಲುವು, 13 ಸೋಲು ಕಂಡಿತು. ಒಟ್ಟಾರೆ ಗೆಲುವಿನ ಸರಾಸರಿ 43.50%.    

Follow Us:
Download App:
  • android
  • ios