ಮುರ್ಸಿಯಾ (ಸ್ಪೇನ್‌)ಫೆ.03: ಸ್ಪೇನ್‌ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ, ಐರ್ಲೆಂಡ್‌ ವಿರುದ್ಧದ ಸ್ನೇಹಾರ್ಥ ಪಂದ್ಯದಲ್ಲಿ 1-1 ಗೋಲುಗಳಿಂದ ಡ್ರಾ ಸಾಧಿಸಿದೆ. ಸ್ಪೇನ್‌ ವಿರುದ್ಧದ 4 ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದ ಭಾರತ, ಇದೀಗ ವಿಶ್ವಕಪ್‌ ಬೆಳ್ಳಿ ವಿಜೇತ ಐರ್ಲೆಂಡ್‌ ವಿರುದ್ಧ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದೆ. 

ಇದನ್ನೂ ಓದಿ: 5ನೇ ಏಕದಿನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ-ತಂಡದಲ್ಲಿ 3 ಬದಲಾವಣೆ!

ಭಾರತದ ಪರ ಗುರ್ಜಿತ್‌ (18ನೇ ನಿ.), ಐರ್ಲೆಂಡ್‌ ಪರ ಸಾರಾ ಹಾಕ್‌ಶಾ (45ನೇ ನಿ.) ಗೋಲು ಬಾರಿಸಿದರು. ಉಭಯ ತಂಡಗಳ ನಡುವಿನ 2ನೇ ಪಂದ್ಯ ಭಾನುವಾರ ನಡೆಯಲಿದ್ದು, 10 ದಿನಗಳ ಸ್ಪೇನ್‌ ಪ್ರವಾಸ ಮುಕ್ತಾಯಗೊಳ್ಳಲಿದೆ.