ಅರ್ಜುನ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿ ವೇಟ್‌ಲಿಫ್ಟರ್ ಸಂಜಿತಾ ಚಾನು
ಕಳೆದ ನಾಲ್ಕು ವರ್ಷಗಳಿಂದ ಅರ್ಜುನ ಪ್ರಶಸ್ತಿ ಎನ್ನುವುದು ಎರಡು ಬಾರಿ ಕಾಮನ್‌ವೆಲ್ತ್ ಚಾಂಪಿಯನ್ ವೇಟ್‌ಲಿಫ್ಟರ್ ಸಂಜಿತಾ ಚಾನು ಈ ಬಾರಿ ಪ್ರಶಸ್ತಿಗೆ ಭಾಜನರಾಗುವ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.12): ಡೋಪಿಂಗ್ ಆರೋಪದಿಂದ ಮುಕ್ತರಾದ ಭಾರತದ ವೇಟ್‌ಲಿಫ್ಟರ್ ಸಂಜಿತಾ ಚಾನು, ಈ ವರ್ಷ ಅರ್ಜುನಾ ಪ್ರಶಸ್ತ ದೊರೆಯಬಹುದು ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಎರಡೂವರೆ ವರ್ಷಗಳ ತನಿಖೆ ಬಳಿಕ, ಬುಧವಾರ ಚಾನು ವಿರುದ್ಧದ ಪ್ರಕರಣವನ್ನು ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ಕೈಬಿಟ್ಟಿತ್ತು. 2016, 2017ರಲ್ಲಿ ಚಾನು ಅರ್ಜುನಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಶಸ್ತಿಗೆ ಅವರನ್ನು ಪರಿಗಣಿಸಲಾಗಿರಲಿಲ್ಲ. ಸಂಜಿತಾ ಚಾನು 2014 ಹಾಗೂ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಮವಾಗಿ 48 ಕೆಜಿ ಹಾಗೂ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಹೊಸ ಕ್ರೀಡಾ ನೀತಿ: ಪಠ್ಯಕ್ರಮಕ್ಕೆ ಕ್ರೀಡೆ
ಮುಂಬೈ: ದೇಶದ ನೂತನ ಕ್ರೀಡಾ ನೀತಿಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಿದ್ದು, ಅದರಲ್ಲಿ ಕ್ರೀಡೆಯನ್ನು ಪಠ್ಯ ಕ್ರಮಕ್ಕೆ ಸೇರಿಸಲಾಗುತ್ತದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಕ್ರಿಕೆಟ್‌ನಿಂದ ದೂರ ದೂರ, ರೈತನಾಗುವತ್ತ ಎಂ.ಎಸ್.ಧೋನಿ?
21ನೇ ಶತಮಾನದಲ್ಲಿ ಒಲಿಂಪಿಕ್ಸ್ ಶಿಕ್ಷಣದ ಕುರಿತು ಆನ್‌ಲೈನ್ ಸಂವಾದದ ವೇಳೆ ರಿಜಿಜು ಈ ವಿಷಯ ತಿಳಿಸಿದರು. ‘ಕ್ರೀಡೆಯನ್ನು ಶಾಲಾ, ಕಾಲೇಜುಗಳಲ್ಲಿ ಶಿಕ್ಷಣವಾಗಿ ಕಲಿಸುವುದು ಬಹಳ ಮುಖ್ಯ. ಕ್ರೀಡಾ ರಾಷ್ಟ್ರವಾಗಿ ಬೆಳೆಯಲು ಈ ಬದಲಾವಣೆ ಅಗತ್ಯ’ ಎಂದು ಅವರು ಹೇಳಿದ್ದಾರೆ.