ಗುಡ್‌ ನ್ಯೂಸ್‌: ಭಾರತದ ಟೆಸ್ಟ್‌ ಪಂದ್ಯಗಳಿನ್ನು ಡಿಡಿ ಸ್ಪೋರ್ಟ್ಸ್‌ನಲ್ಲೂ ಲಭ್ಯ

* ಕ್ರೀಡಾಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ 

* ಏಕದಿನ, ಟಿ20 ಪಂದ್ಯಗಳ ಜೊತೆ ರಾಷ್ಟ್ರೀಯ ಅಗತ್ಯತೆ ಎಂದು ಪರಿಗಣಿಸಿ ಟೆಸ್ಟ್‌ ಪಂದ್ಯಗಳನ್ನೂ ಇನ್ನು ಮುಂದೆ ಪ್ರಸಾರ

* ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿ ಆಗಿದ್ದರೂ ಪಂದ್ಯಗಳ ಪ್ರಸಾರ ಹಕ್ಕು ಪಡೆಯುವ ಸಂಸ್ಥೆಗಳಿಗೆ ಇದರಿಂದ ಹಿನ್ನಡೆ

Indian government updates protected sports broadcasts list Test match also broadcasts in DD Sports kvn

ನವದೆಹಲಿ(ಮೇ.12): ಇನ್ನು ಮುಂದೆ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಆಡುವ ಎಲ್ಲಾ ಟೆಸ್ಟ್‌ ಪಂದ್ಯಗಳು ಡಿಡಿ ಸ್ಪೋರ್ಟ್ಸ್‌ ಚಾನೆಲ್‌ನಲ್ಲಿ (DD Sports Channel) ಪ್ರಸಾರಗೊಳ್ಳಲಿದೆ. ಏಕದಿನ, ಟಿ20 ಪಂದ್ಯಗಳ ಜೊತೆ ರಾಷ್ಟ್ರೀಯ ಅಗತ್ಯತೆ ಎಂದು ಪರಿಗಣಿಸಿ ಟೆಸ್ಟ್‌ ಪಂದ್ಯಗಳನ್ನೂ ಇನ್ನು ಮುಂದೆ ಪ್ರಸಾರ ಮಾಡಬೇಕು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿದೇರ್ಶನ ನೀಡಿದೆ. 

ಇದು ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿ ಆಗಿದ್ದರೂ ಪಂದ್ಯಗಳ ಪ್ರಸಾರ ಹಕ್ಕು ಪಡೆಯುವ ಸಂಸ್ಥೆಗಳಿಗೆ ಇದರಿಂದ ಹಿನ್ನಡೆಯುಂಟಾಗುವ ಸಾಧ್ಯತೆ ಇದೆ. ಇನ್ನು, ಭಾರತದ ಕ್ರಿಕೆಟ್‌ ಪಂದ್ಯಗಳು ಮಾತ್ರವಲ್ಲದೇ ಒಲಿಂಪಿಕ್ಸ್‌ (Olympics), ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಗೇಮ್ಸ್‌ ಸ್ಪರ್ಧೆಗಳು, ಭಾರತ ಪಾಲ್ಗೊಳ್ಳಲಿರುವ ಡೇವಿಸ್‌ ಕಪ್‌, ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ, ಹಾಕಿ ವಿಶ್ವಕಪ್‌, ಫಿಫಾ ಫುಟ್ಬಾಲ್‌ ವಿಶ್ವಕಪ್‌ ಪಂದ್ಯಗಳನ್ನೂ ಪ್ರಸಾರ ಮಾಡುವಂತೆ ಸೂಚನೆ ನೀಡಲಾಗಿದೆ.

ಇಂಗ್ಲೆಂಡ್‌ ತಂಡಕ್ಕೆ ಮೆಕಲಮ್‌ ಕೋಚ್‌?

ಲಂಡನ್‌: ನ್ಯೂಜಿಲೆಂಡ್‌ ಮಾಜಿ ನಾಯಕ, ಸದ್ಯ ಐಪಿಎಲ್‌ನ (IPL 2022) ಕೋಲ್ಕತಾ ನೈಟ್‌ ರೈಡ​ರ್ಸ್ (Kolkata Knight Riders) ತಂಡದ ಪ್ರಧಾನ ಕೋಚ್‌ ಆಗಿರುವ ಬ್ರೆಂಡನ್‌ ಮೆಕಲಮ್‌ ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕೆಲ ಬ್ರಿಟಿಷ್‌ ಮಾಧ್ಯಮಗಳ ವರದಿ ಪ್ರಕಾರ ಮೆಕಲಮ್‌ ಶೀಘ್ರದಲ್ಲೇ ತಂಡದ ಕೋಚ್‌ ಹುದ್ದೆ ಅಲಂಕರಿಲಿದ್ದಾರೆ ಎಂದು ಗೊತ್ತಾಗಿದೆ. ಅಲ್ಲದೇ, ಈ ಆವೃತ್ತಿ ಐಪಿಎಲ್‌ ಮುಕ್ತಾಯಗೊಂಡ ಬಳಿಕ ಕೆಕೆಆರ್‌ ಕೋಚ್‌ (KKR Coach) ಹುದ್ದೆ ತ್ಯಜಿಸುತ್ತೇನೆ ಎಂದು ಫ್ರಾಂಚೈಸಿಗೆ ತಿಳಿಸಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಫೆಬ್ರವರಿಯಲ್ಲಿ ಆ್ಯಶಸ್‌ ಸರಣಿ ಸೋಲಿನ ಬಳಿಕ ಇಂಗ್ಲೆಂಡ್‌ ಕೋಚ್‌ ಹುದ್ದೆ ಖಾಲಿ ಇದೆ.

ಐಪಿಎಲ್‌ನಲ್ಲಿ ವಾರ್ನರ್‌ 8ನೇ ಬಾರಿ 400+ ರನ್‌!

ನವಿ ಮುಂಬೈ: ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಆಡುತ್ತಿರುವ ಆಸ್ಪ್ರೇಲಿಯಾದ ಡೇವಿಡ್‌ ವಾರ್ನರ್‌ (David Warner) ಐಪಿಎಲ್‌ ಆವೃತ್ತಿಯಲ್ಲಿ 8ನೇ ಬಾರಿ 400ಕ್ಕೂ ಹೆಚ್ಚು ರನ್‌ ಗಳಿಸಿದ್ದು, ಈ ಸಾಧನೆ ಮಾಡಿದ 4ನೇ ಬ್ಯಾಟರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವರು ಈ ಬಾರಿ ಕೇವಲ 10 ಪಂದ್ಯಗಳಲ್ಲಿ 61ರ ಸರಾಸರಿಯಲ್ಲಿ 427 ರನ್‌ ಕಲೆ ಹಾಕಿದ್ದಾರೆ. 

CSK ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಟಗಾರ ರವೀಂದ್ರ ಜಡೇಜಾ IPL ಟೂರ್ನಿಯಿಂದಲೇ ಔಟ್..!

ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ 400+ ರನ್‌ ಗಳಿಸಿದ ಆಟಗಾರ ಸುರೇಶ್‌ ರೈನಾ (Suresh Raina). ಈ ಬಾರಿ ಮೆಗಾ ಹರಾಜಾಗದೇ ಉಳಿದಿದ್ದ ಅವರು 9 ಐಪಿಎಲ್‌ ಆವೃತ್ತಿಗಳಲ್ಲಿ 400+ ರನ್‌ ಬಾರಿಸಿದ್ದಾರೆ. ಇನ್ನು ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ ಕೂಡಾ 8, ರೋಹಿತ್‌ ಶರ್ಮಾ 7 ಬಾರಿ 400+ ರನ್‌ ಗಳಿಸಿದ್ದಾರೆ.

Latest Videos
Follow Us:
Download App:
  • android
  • ios