Asianet Suvarna News Asianet Suvarna News

ಇಂಡೋ-ಪಾಕ್ ಕ್ರಿಕೆಟ್: ಶೋಯಿಬ್ ಮಲ್ಲಿಕ್ ಕಾಲೆಳೆದ ಫ್ಯಾನ್ಸ್

ಭಾರತ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶೋಯಿಬ್ ಮಲ್ಲಿಕ್‌ರನ್ನ ಭಾರತೀಯ ಅಭಿಮಾನಿಗಳು ಕಾಲೆಳೆದಿದ್ದಾರೆ. ಅಭಿಮಾನಿಗಳ ಕೂಗಾಟಕ್ಕೆ ಶೋಯಿಬ್ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ ವೀಡಿಯೋ.

Indian fans call Shoaib Malik jiju during India vs Pakistan match
Author
Bengaluru, First Published Sep 24, 2018, 8:10 PM IST

ದುಬೈ(ಸೆ.24): ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಭರ್ಜಿರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಕಾಲೆಳೆದಿದ್ದಾರೆ.

ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶೋಯಿಬ್ ಮಲ್ಲಿಕ್‌ಗೆ ಅಭಿಮಾನಿಗಳು ಜೀಜು ಎಂದು ಕರೆದಿದ್ದಾರೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮದುವೆಯಾಗಿರುವ ಮಲ್ಲಿಕ್‌ರನ್ನ ಭಾರತೀಯರು ಜೀಜು ಎಂದು ಕರೆದಿದ್ದಾರೆ.

 

 

ಅಭಿಮಾನಿಗಳು ಹಲವು ಬಾರಿ ಜೀಜು ಎಂದು ಕರೆದಾಗ ಮಲ್ಲಿಕ್ ಹಿಂತಿರುಗಿ ಕೈ ಸನ್ನೆ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳತ್ತ ಮುಗುಳು ನಗೆ ಬೀರಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

Follow Us:
Download App:
  • android
  • ios