Asianet Suvarna News Asianet Suvarna News

ಉಚಿತ ಟಿಕೆಟ್ ಹಗ್ಗಜಗ್ಗಾಟ-ಭಾರತ-ವಿಂಡೀಸ್ ಪಂದ್ಯ ಸ್ಥಳಾಂತರ?

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಸರಣಿ ಆರಂಭಕ್ಕೂ ಮುನ್ನವೇ ವಿಘ್ನ ಎದುರಾಗಿದೆ. ಉಚಿತ ಟಿಕೆಟ್ ವಿಚಾರಕ್ಕೆ ಶುರುವಾದ ಹಗ್ಗಜಗ್ಗಾಟ ಇದೀಗ  ಪಂದ್ಯವನ್ನ ಸ್ಥಳಾಂತರ ಮಾಡೋವರೆಗೂ ತಲುಪಿದೆ. ಇಲ್ಲಿದೆ ಉಚಿತ ಟಿಕೆಟ್ ಜಗಳದ ವಿವರ.
 

India West Indies 2nd One day could be shifted out of Indore
Author
Bengaluru, First Published Sep 30, 2018, 9:47 PM IST
  • Facebook
  • Twitter
  • Whatsapp

ಇಂದೋರ್(ಸೆ.30): ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಅಕ್ಟೋಬರ್ 24 ರಂದು ನಡೆಯಲಿರುವ 2ನೇ ಏಕದಿನ ಪಂದ್ಯ ಇಂದೋರ್ ಕ್ರೀಡಾಂಗಣದಿಂದ ಸ್ಥಳಾಂತರವಾಗೋ ಸಾಧ್ಯತೆ ಇದೆ. ಉಚಿತ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಾಗೂ ಮಧ್ಯಪ್ರದೇಶ ನಡುವಿನ ಜಗಳದಿಂದ ಇದೀಗ ಪಂದ್ಯವನ್ನ ಸ್ಥಳಾಂತರ ಮಾಡೋ ಸಾಧ್ಯತೆ ಹೆಚ್ಚಿದೆ.

ಬಿಸಿಸಿಐ ನೂತನ ನಿಯಮದ ಪ್ರಕಾರ ಪಂದ್ಯದ ಶೇಕಡಾ 90 ರಷ್ಟು ಟಿಕೆಟ್‌ಗಳನ್ನ ಸಾರ್ವಜನಿಕರ ಮಾರಾಟಕ್ಕೆ ಇಡಬೇಕು. ಇನ್ನುಳಿದ ಶೇಕಡಾ 10 ರಷ್ಟು ಟಿಕೆಟ್‌ಗಳನ್ನ ಮಾತ್ರ ಕಾಂಪ್ಲಿಮೆಂಟರಿ ಟಿಕೆಟ್‌ಗಳಾಗಿ ನೀಡಬೇಕು. ಮಧ್ಯಪ್ರದೇಶದ ಇಂದೋರ್ ಕ್ರೀಡಾಂಗಣದ ಒಟ್ಟು ಸಾಮರ್ಥ್ಯ 27,500. ಹೀಗಾಗಿ ಉಚಿತ ಟಿಕೆಟ್ ಸಂಖ್ಯೆ 2750 ಮಾತ್ರ.

2750 ಉಚಿತ ಟಿಕೆಟ್‌ಗಳಲ್ಲಿ ಪ್ರಾಯೋಜಕರಿಗೆ ಹಾಗೂ ಇತರ ಕೆಲವರ  ಜೊತೆ ಹಂಚಿಕೊಳ್ಳಲು ಬಿಸಿಸಿಐ ಸೂಚಿಸಿದೆ. ಇದನ್ನ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಿರಾಕರಿಸಿದೆ. ಕಡಿಮೆ ಉಚಿತ ಟಿಕೆಟ್‌ಗಳಿಂದ ಸಮಸ್ಯೆ ಎದುರಾಗಿತ್ತಿದೆ. ಹೀಗಾಗಿ ಪಂದ್ಯ ಆಯೋಜಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ನಿಗಧಿತ ಸಮಯ ಹಾಗೂ ಸ್ಥಳದಲ್ಲಿ ಆಯೋಜಿಸಲಾದ ಪಂದ್ಯವನ್ನ ಬೇರೆಡೆ ಸ್ಥಳಾಂತರಿಸಲು ನಮ್ಮ ಸಮ್ಮತವಿಲ್ಲ. ವಿನಾ ಕಾರಣ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಸಮಸ್ಯೆ ಸೃಷ್ಟಿಸುತ್ತಿದೆ. ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದೇವೆ. ಮಾತಿಗೆ ಒಪ್ಪದಿದ್ದರೆ ಪಂದ್ಯವನ್ನ ಬೇರೆಡೆ ಸ್ಥಳಾಂತರಿಸಲಿದ್ದೇವೆ ಎಂದು ಬಿಸಿಸಿಐ ಹೇಳಿದೆ.

Follow Us:
Download App:
  • android
  • ios