Asianet Suvarna News Asianet Suvarna News

ಪಂತ್, ರಹಾನೆ ಜೊತೆಯಾಟ-ವಿಂಡೀಸ್ ವಿರುದ್ಧ ಭಾರತದ ಆರ್ಭಟ!

ವೆಸ್ಟ್ಇಂಡೀಸ್ ನಡುವಿನ ಹೈದರಾಬಾದ್ ಟೆಸ್ಟ್ ಪಂದ್ಯದ ದ್ವಿತೀಯ ದಿನ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ದಿನ ಬೌಲಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ 2ನೇ ಬ್ಯಾಟಿಂಗ್‌ನಲ್ಲಿ ಮಿಂಚಿದೆ. ಇಲ್ಲಿದೆ 2ನೇ ದಿನದಾಟದ ಹೈಲೈಟ್ಸ್.

India vs West Indies test cricket Team India 308/4 at day 2 stumps
Author
Bengaluru, First Published Oct 13, 2018, 5:15 PM IST

ಹೈದರಾಬಾದ್(ಅ.13): ವೆಸ್ಟ್ಇಂಡೀಸ್ ವಿರುದ್ದದ 2ನೇ ಟೆಸ್ಟ್ ಪಂದ್ಯ 2ನೇ ದಿನ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದೆ. ಮೊದಲ ಸೆಶನ್‌ನಲ್ಲಿ ವೆಸ್ಟ್ಇಂಡೀಸ್ ತಂಡವನ್ನ ಆಲೌಟ್ ಮಾಡಿದ ಭಾರತ, ಮೊದಲ ಇನ್ನಿಂಗ್ಸ್ ಆರಂಭಿಸಿತು. ದಿನದಾಟ ಅಂತ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 308 ರನ್ ಸಿಡಿಸಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 3 ರನ್ ಹಿನ್ನಡೆಯಲ್ಲಿದೆ.

2ನೇ ದಿನ ವೆಸ್ಟ್ಇಂಡೀಸ್ ತಂಡವನ್ನ 310 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಕೆಎಲ್ ರಾಹುಲ್ ಮತ್ತೆ ವೈಫಲ್ಯ ಅನುಭವಿಸಿದರು. ರಾಹುಲ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು.

ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಪೃಥ್ವಿ ಶಾ, ಹೈದರಾಬಾದ್ ಟೆಸ್ಟ್‌ನಲ್ಲೂ ದಾಖಲೆ ಬರೆದರು. ಕೇವಲ 39 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೃಥ್ವಿ ಶಾ 53 ಎಸೆತದಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 70  ರನ್ ಸಿಡಿಸಿದರು.

ಚೇತೇಶ್ವರ್ ಪೂಜಾರ 10 ರನ್ ಸಿಡಿಸಿದರೆ, ನಾಯಕ ವಿರಾಟ್ ಕೊಹ್ಲಿ 45 ರನ್ ಸಿಡಿಸಿ ಪೆವಿಲಿಯನ್ ಸೇರಿದರು. 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಅಜಿಂಕ್ಯ ರಹಾನೆ ಹಾಗೂ ರಿಷಬ್ ಪಂತ್ ಜೊತೆಯಾಟದಿಂದ ಭಾರತ ನಿರಾಯಾಸವಾಗಿ 300 ರನ್ ಗಡಿ ದಾಟಿತು.

ರಹಾನೆ ಹಾಗೂ ರಿಷಬ್ ಪಂತ್ ಆಕರ್ಷಕ ಅರ್ಧಶತಕ ಸಿಡಿಸಿದರು. ದಿನದಾಟ ಅಂತ್ಯದಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 308 ರನ್ ಸಿಡಿಸಿತು. ಈ ಮೂಲಕ 3 ಮೊದಲ ಇನ್ನಿಂಗ್ಸ್ ಮುನ್ನಡೆಗೆ 3 ರನ್ ಬೇಕಿದೆ. ರಿಷಬ್ ಪಂತ್ ಅಜೇಯ 85, ಅಜಿಂಕ್ಯ ರಹಾನೆ ಅಜೇಯ 75 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

Follow Us:
Download App:
  • android
  • ios