Asianet Suvarna News Asianet Suvarna News

ಇಂಡೋ-ವಿಂಡೀಸ್: 2 ನೇ ಏಕದಿನ ಟಿಕೆಟ್ ದರ ಕಡಿತ-ಕೇವಲ 250 ರೂ!

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯದ ಟಿಕೆಟ್ ದರವನ್ನ ಕಡಿತಗೊಳಿಸಲಾಗಿದೆ. ಹೆಚ್ಚಿನ ಅಭಿಮಾನಿಗಳನ್ನ ಆಕರ್ಷಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಆರಂಭಿಕ ಟಿಕೆಟ್ ದರ 250 ರೂಪಾಯಿಗೆ ಇಳಿಸಲಾಗಿದೆ.  
 

India vs West indies 2nd ODI match ticket price reduced
Author
Bengaluru, First Published Oct 10, 2018, 1:20 PM IST

ವಿಶಾಖಪಟ್ಟಣಂ(ಅ.10): ಭಾರತ ಹಾಗೂ  ವೆಸ್ಟ್ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯದ ಟಿಕೆಟ್ ದರವನ್ನ ಕಡಿತಗೊಳಿಸಲಾಗಿದೆ. ಗರಿಷ್ಠ ಅಭಿಮಾನಿಗಳನ್ನ ಆಕರ್ಷಿಸೋ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ

ಇಂದೋರ್‌ನಲ್ಲಿ ನಡೆಯಬೇಕಿದ್ದ ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಉಚಿತ ಟಿಕೆಟ್ ಜಗಳದಿಂದಾಗಿ ವಿಶಾಖಪಟ್ಟಣಂಗೆ ಸ್ಥಳಾಂತರಗೊಂಡಿತ್ತು. ಇದೀಗ ವಿಶಾಖಪಟ್ಟಣಂ ಪಂದ್ಯದ ಟಿಕೆಟ್ ಮೇಲೆ ದರ ಕಡಿತಗೊಳಿಸಲಾಗಿದೆ.

ದ್ವಿತೀಯ ಏಕದಿನ ಪಂದ್ಯದ ಟಿಕೆಟ್ ದರಗಳು 250 ರೂಪಾಯಿಯಿಂದ ಆರಂಭಗೊಳ್ಳಲಿದೆ. 500, 750, 1200, 1800 ರೂಪಾಯಿ ಟಿಕೆಟ್‌ಗಳು ಲಭ್ಯವಿದೆ. ಇನ್ನು 2500 ರೂಪಾಯಿ ಟಿಕೆಟ್ 2000 ರೂಪಾಯಿ ಕಡಿತ ಮಾಡಲಾಗಿದೆ. 3500 ರೂಪಾಯಿ ಟಿಕೆಟ್ ಇದೀಗ 2500 ರೂಪಾಯಿ ಹಾಗೂ 6000 ರೂಪಾಯಿ ಟಿಕೆಟ್ ಇದೀಗ 4000  ರೂಪಾಯಿಗೆ ದೊರೆಯಲಿದೆ ಎಂದು ದಿ ಹಿಂದೂ ವರದಿ ಮಾಡಿದೆ.
 

Follow Us:
Download App:
  • android
  • ios