ಚೆಲ್ಮ್ಸ್‌ಫೋರ್ಡ್(ಜು.26): ಎಸೆಕ್ಸ್ ಇಂಗ್ಲೆಂಡ್ ಕೌಂಟಿ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ದ್ವಿತೀಯ ದಿನದ ಆರಂಭದಲ್ಲೇ ಭಾರತ ವಿಕೆಟ್ ಕಳೆದುಕೊಂಡಿದೆ. ಮೊದಲ ದಿನ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ 82 ರನ್ ಸಿಡಿಸಿ ಔಟಾಗಿದ್ದಾರೆ.

ಕಾರ್ತಿಕ್‌ಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಸರೆಯಾಗಿದ್ದಾರೆ. ಆದರೆ ಕನ್ನಡಿಗ ಕರುಣ್ ನಾಯರ್ ಕೇವಲ 4 ರನ್‌ ಸಿಡಿಸಿ ಪೆವಿಲಿಯನ್ ಸೇರಿದ್ದಾರೆ. ಇದರೊಂದಿಗೆ ಭಾರತ 328 ರನ್‌ಗೆ 8ನೇ ವಿಕೆಟ್ ಪತನಗೊಂಡಿದೆ. 

 

 

ಮೊದಲ ದಿನ ಟಾಸ್ ಗೆದ್ದ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಶಿಖರ್ ಧವನ್ ಡೌಕಟ್, ಚೇತೇಶ್ವರ್ ಪೂಜಾರ 1 ಹಾಗೂ ಅಜಿಂಕ್ಯ ರಹಾನೆ 17 ರನ್‌ಗೆ ಔಟಾಗಿದ್ದರು. ಆದರೆ ಮುರಳಿ ವಿಜಯ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತ್ತು.

ಮುರಳಿ ವಿಜಯ್ 53 ಹಾಗೂ ಕೊಹ್ಲಿ 68 ರನ್‌ಗಳಿಸಿ ಔಟಾದರು. ಕನ್ನಡಿಗ ಕೆಎಲ್ ರಾಹುಲ್ 58 ರನ್‌ಗಳ ಕಾಣಿಕೆ ನೀಡಿದರು. ಮೊದಲ ದಿನದ ಅಂತ್ಯದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದಿಂದ ಭಾರತ 6 ವಿಕೆಟ್ ನಷ್ಟಕ್ಕೆ 322ರನ್ ಸಿಡಿಸಿತ್ತು.