Asianet Suvarna News Asianet Suvarna News

ಟೀಂ ಇಂಡಿಯಾದ 6ನೇ ವಿಕೆಟ್ ಪತನ-ಮಳೆಗಾಗಿ ಪ್ರಾರ್ಥನೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ಹಿಡಿತ ಸಾಧಿಸಿದ್ದಾರೆ. 4ನೇ ದಿನವೂ ಇಂಗ್ಲೆಂಡ್ ಪ್ರಾಬಲ್ಯ ಮುಂದುವರಿಸಿದ್ದರೆ, ಟೀಂ ಇಂಡಿಯಾ ಹೋರಾಟ ನೀಡಲು ಪರದಾಡುತ್ತಿದೆ. ಇಲ್ಲಿದೆ ನಾಲ್ಕನೇ ದಿನದ ಅಪ್‌ಡೇಟ್ಸ್

India vs england test team india in deep trouble
Author
Bengaluru, First Published Aug 12, 2018, 8:20 PM IST

ಲಾರ್ಡ್ಸ್(ಆ.12): ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಗೆಲುವು ಬದಿಗಿರಲಿ, ಕನಿಷ್ಠ ಹೋರಾಟ ನೀಡಬೇಕಾದ ಭಾರತ ಮಕಾಡೆ ಮಲಗಿದೆ. ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ಈಗಾಗಲೇ 6 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಸೋಲಿನತ್ತ ಮುಖಮಾಡಿದೆ.

89 ರನ್ ಹಿನ್ನಡೆಯೊಂದಿದೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಮುರಳಿ ವಿಜಯ್ ಶೂನ್ಯ ಸುತ್ತಿದರೆ, ಕೆಎಲ್ ರಾಹುಲ್ 10 ರನ್‌ಗಳಿಸಿ ಔಟಾಗಿದ್ದರು.

ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ತಂಡಕ್ಕೆ ಆಸರೆಯಾಗಿದ್ದರು. 33 ಎಸೆತ ಎದುರಿಸಿ ಹೋರಾಟ ನೀಡೋ ಸೂಚನೆ ನೀಡಿದ ರಹಾನೆ ಸ್ಕೋರ್ 13 ದಾಟಲಿಲ್ಲ. 35 ರನ್‌ಗಳಿಸುವಷ್ಟರಲ್ಲೇ ಭಾರತ 3ನೇ ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾವನ್ನ ಕಾಪಾಡಬೇಕಾದ ಜವಾಬ್ದಾರಿ  ಚೇತೇಶ್ವರ್ ಪೂಜಾರ 17 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. 

ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರೂ 17 ರನ್ ದಾಟಲಿಲ್ಲ. ಇನ್ನು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮರೆತೇ ಬಿಟ್ಟಿದ್ದಾರೆ. ಕಾರ್ತಿಕ್ ಡಕೌಟ್ ಆಗಿ ಪೆವಿಲಿಯನ್ ಸೇರಿದ್ದಾರೆ.  ಈ ಮೂಲಕ ಟೀಂ ಇಂಡಿಯಾ 61 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 224 ರನ್ ಹಿನ್ನಡೆಯಲ್ಲಿದೆ.

Follow Us:
Download App:
  • android
  • ios