ನಾಟಿಂಗ್‌ಹ್ಯಾಮ್(ಆ.22): ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಗೆಲುವು ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಆರಂಭಿಕ 2 ಟೆಸ್ಟ್ ಪಂದ್ಯಗ ಸೋಲಿಗೆ ತಿರುಗೇಟು ನೀಡಿದ ಕೊಹ್ಲಿ ಸೈನ್ಯ ಗೆಲುವನ್ನ ಭರ್ಜರಿಯಾಗಿ ಸಂಭ್ರಮಿಸಿದೆ.

ಟೀಂ ಇಂಡಿಯಾ ಕ್ರಿಕೆಟಿಗ ಸಂಭ್ರಮ ಇದೀಗ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ. 3ನೇ ಟೆಸ್ಟ್ ಪಂದ್ಯದಲ್ಲಿ 203ರನ್ ಗೆಲುವು ಸಾಧಿಸಿದ ಟೀಂ ಇಂಡಿಯಾ ಮೈದಾನದಲ್ಲಿ ಸಂಭ್ರಮ ಆಚರಿಸಿತು. ಬಳಿಕ ಡ್ರೆಸ್ಸಿಂಗ್ ರೂಂ ತೆರಳಿದ ಕ್ರಿಕೆಟಿಗರು ಸಂಭ್ರದಲ್ಲಿ ಕುಣಿದಾಡಿದರು.

ತಂಡದ ಸಂಭ್ರದಲ್ಲಿ ಆರಂಭಿಕರಾದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಬಿಯರ್ ಬಾಟಲ್ ಹಿಡಿದಿರುವ ಫೋಟೋ ಇದೀಗ ವಿವಾದಕ್ಕೆ ಕಾರಣವಾಗೋ ಸಾಧ್ಯತೆ ಇದೆ. ಗೆಲುವಿನ ಸಂಭ್ರಮವನ್ನ ತಂಡದ ಸದಸ್ಯನ ಜೊತೆ ಎಂದು ಬರೆದಿರು ಶಿಖರ್ ಧವನ್ ಬಿಯರ್ ಬಾಟಲ್ ಫೋಟೋ ಅಪ್‌ಲೋಡ್ ಮಾಡಿದ್ದಾರೆ.

 

 

ಬಿಯರ್ ಬಾಟಲ್ ಫೋಟೋ ವಿವಾದ ಸೃಷ್ಟಿಸಲು ಕಾರಣವೂ ಇದೆ. 2016ರಲ್ಲಿ ಭಾರತ ತಂಡದ ವೆಸ್ಟ್ಇಂಡೀಸ್ ಪ್ರವಾಸದ ವೇಳೆ ಕೆಎಲ್ ರಾಹುಲ್ ಉಮೇಶ್ ಯಾದವ್ ಹಾಗೂ ಸ್ಟುವರ್ಟ್ ಬಿನ್ನಿ ಬಿಯರ್ ಬಾಟಲ್ ಫೋಟೋ ವೈರಲ್ ಆಗಿತ್ತು. ಇಷ್ಟೇ ಅಲ್ಲ ಬಿಸಿಸಿಐ ತಂಡದ ಮ್ಯಾನೇಜರ್ ಹಾಗೂ ಈ ಮೂವರು ಕ್ರಿಕೆಟಿಗರಿಗೆ ಎಚ್ಚರಿಕೆ ನೀಡಿತ್ತು.