Asianet Suvarna News Asianet Suvarna News

ಭಾರತ-ಇಂಗ್ಲೆಂಡ್ ಟೆಸ್ಟ್: 72 ರನ್ ಸಿಡಿಸಿ ಚೇತೇಶ್ವರ್ ಪೂಜಾರ ಔಟ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ.  3ನೇ ದಿನದಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿರುವ ಟೀಂ ಇಂಡಿಯಾ ಆಂಗ್ಲರಿಗೆ ಶಾಕ್ ನೀಡಲು ರೆಡಿಯಾಗಿದೆ. ಇಲ್ಲಿದೆ 3ನೇ ದಿನದಾಟದ ಅಪ್‌ಡೇಟ್ಸ್
 

India vs england test stokes break Virat kohli Cheteshwar pujara partnership
Author
Bengaluru, First Published Aug 20, 2018, 7:02 PM IST

ನಾಟಿಂಗ್‌ಹ್ಯಾಮ್(ಆ.20): ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಇದೀಗ 3ನೇ ವಿಕೆಟ್ ಕಳೆದುಕೊಂಡಿದೆ. ಶತಕದತ್ತ ಮುನ್ನಗ್ಗುತ್ತಿದ್ದ ಚೇತೇಶ್ವರ್ ಪೂಜಾರ 72 ರನ್ ಸಿಡಿಸಿ ಔಟಾದರು. 

ತೃತೀಯ ದಿನದಾಟದಲ್ಲಿ 2 ವಿಕೆಟ್ ನಷ್ಟಕ್ಕೆ 124 ರನ್‌ಗಳೊಂದಿಗೆ 2ನೇ ಇನ್ನಿಂಗ್ಸ್ ಮುಂದುವರಿಸಿದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಆಸರೆಯಾದರು.ಇಂಗ್ಲೆಂಡ್ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದ ಪೂಜಾರ 72 ರನ್ ಸಿಡಿಸಿ ಔಟಾದರು. ಸದ್ಯ  ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 224 ರನ್ ಸಿಡಿಸಿದೆ. ಈ ಮೂಲಕ ಭಾರತ 393 ರನ್ ಮುನ್ನಡೆ ಸಾಧಿಸಿದೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ 161ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ 168 ರನ್ ಮುನ್ನಡೆ ಪಡೆದುಕೊಂಡಿತ್ತು.

Follow Us:
Download App:
  • android
  • ios