ಲಾರ್ಡ್ಸ್ ಟೆಸ್ಟ್: ಟೀಂ ಇಂಡಿಯಾ ನೆರವಿಗೆ ಬಂದ ಮಳೆರಾಯ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 6:19 PM IST
India vs england test rain saved team india
Highlights

ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಆಂಗ್ಲರು, ಇದೀಗ ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ಸೋಲಿನತ್ತ ಮುಖಮಾಡಿದ್ದ ಟೀಂ ಇಂಡಿಯಾಗೆ ಇದೀಗ ಮಳೆರಾಯ ಆಪತ್ಬಾಂಧವನಾಗಿ ನೆರವಿಗೆ ಬಂದಿದೆ.

ಲಾರ್ಡ್ಸ್(ಆ.12): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸಿದೆ. ಆದರೆ 4ನೇ ದಿನದಾಟದ ಮಳೆ ಭಾರತೀಯ ಅಭಿಮಾನಿಗಳ ಮುಖದಲ್ಲಿ ಸಂತಸ ಮನೆಮಾಡಿದೆ. 289 ರನ್ ಹಿನ್ನಡೆಯೊಂದಿದೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಮುರಳಿ ವಿಜಯ್ ಶೂನ್ಯ ಸುತ್ತಿದರೆ, ಕೆಎಲ್ ರಾಹುಲ್ 10 ರನ್‌ಗಳಿಸಿ ಔಟಾಗಿದ್ದರು.

ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಚೇತರಿಕೆ ನೀಡೋ ಪ್ರಯತ್ನ ಮಾಡಿದರು. ಭೋಜನ ವಿರಾಮದ ವೇಳೆ ಭಾರತ 2 ವಿಕೆಟ್ ನಷ್ಟಕ್ಕೆ 17 ರನ್ ಸಿಡಿಸಿತ್ತು. ಆದರೆ ಮಳೆಯಿಂದಾಗಿ ಮತ್ತೆ ಪಂದ್ಯ ಆರಂಭಗೊಳ್ಳಲಿಲ್ಲ. ಸದ್ಯ ತಾತ್ಕಾಲಿಕವಾಗಿ ಪಂದ್ಯವನ್ನ ಸ್ಥಗಿತಗೊಳಿಸಲಾಗಿದೆ. ಮಳೆರಾಯನ ಆರ್ಭಟದಿಂದ ಸದ್ಯ ಭಾರತ ನಿಟ್ಟುಸಿರುಬಿಟ್ಟಿದೆ.

 

 

ಭಾರತದ 2ನೇ ಇನ್ನಿಂಗ್ಸ್ ಆರಂಭಕ್ಕೂ ಮೊದಲು 4ನೇ ದಿನದಾಟದ ಮೊದಲ ಇನ್ನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 396 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 289 ರನ್ ಮುನ್ನಡೆ ಪಡೆಯಿತು.

loader