Asianet Suvarna News Asianet Suvarna News

ಭಾರತ-ಇಂಗ್ಲೆಂಡ್ ಟೆಸ್ಟ್: ಶತಕದ ಸನಿಹದಲ್ಲಿ ರಹಾನೆ ಔಟ್!

ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ಆರಂಭದಲ್ಲೇ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್
 

India vs England test Rahane depart india 4th down
Author
Bengaluru, First Published Aug 18, 2018, 9:30 PM IST

ನಾಟಿಂಗ್‌ಹ್ಯಾಮ್(ಆ.18): ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದ ಉಪನಾಯಕ ಅಜಿಂಕ್ಯ ರಹಾನೆ  81 ರನ್ ಸಿಡಿಸಿ ಔಟಾಗಿದ್ದಾರೆ. ಈ ಮೂಲಕ ಭಾರತ 241 ರನ್‌ಗಳಿಗೆ 4ನೇ ವಿಕೆಟ್ ಕಳೆದುಕೊಂಡಿದೆ.

ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ  ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ 60 ರನ್‌ಗಳ ಜೊತೆಯಾಟ ನೀಡಿದರು. ಆದರೆ  ಧವನ್ 35 ರನ್ ಸಿಡಿಸಿದರೆ, ರಾಹುಲ್ 23 ರನ್ ಗಳಿಸಿ ಔಟಾದರು. ಆರಂಭಿಕರ ವಿಕೆಟ್ ಪತನದ ಬಳಿಕ  ಚೇತೇಶ್ವರ ಪೂಜಾರ ಆಧಾರವಾಗಲಿಲ್ಲ.

ಪೂಜಾರ 14 ರನ್ ಸಿಡಿಸಿ ಔಟಾದರು. 82 ರನ್‌ಗೆ 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಆಸರೆಯಾದರು. ಕೊಹ್ಲಿ ಹಾಗೂ ರಹಾನೆ ಹಾಫ್ ಸೆಂಚುರಿ ಸಿಡಿಸಿ ಆಸರೆಯಾದರು. ಕಳಪೆ ಫಾರ್ಮ್‌ನಿಂದ ಹೊರಬಂದು ಉತ್ತಮ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ 81 ರನ್ ಸಿಡಿಸಿ ಔಟಾದರು. 

Follow Us:
Download App:
  • android
  • ios