ಗಾಯದ ಮೇಲೆ ಬರೆ ಎಳೆದಂತಾಗಿದೆ ಇಶಾಂತ್ ಶರ್ಮಾ ಪರಿಸ್ಥಿತಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 6:22 PM IST
India vs england test ishanth sharma found guilty and fined
Highlights

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಬುತ ಬೌಲಿಂಗ್ ದಾಳಿ ಸಂಘಿಸಿದ ಇಶಾಂತ್ ಶರ್ಮಾ ಹೋರಾಟಕ್ಕೆ ಗೆಲುವು ಮಾತ್ರ ಸಿಗಲಿಲ್ಲ. ಸೋಲಿನ ನೋವಿನೊಂದಿಗೆ ಪೆವಿಲಿಯನ್ ಸೇರಿದ ಇಶಾಂತ್ ಶರ್ಮಾಗೆ ಐಸಿಸಿ ಶಾಕ್ ನೀಡಿದೆ.  
 

ಎಡ್ಜ್‌ಬಾಸ್ಟನ್(ಆ.04): ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತ ಬೆನ್ನಲ್ಲೇ, ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾಗೆ ಮತ್ತೊಂದು ಆಘಾತ ಎದುರಾಗಿದೆ. ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಇಶಾಂತ್ ಶರ್ಮಾ ಅನುಚಿತ ವರ್ತನೆಗೆ ದಂಡ ವಿಧಿಸಲಾಗಿದೆ.

3ನೇ ದಿನದಾಟದಲ್ಲಿ ಇಶಾಂತ್ ಶರ್ಮಾ ಡೇವಿಡ್ ಮಲಾನ್ ವಿಕೆಟ್ ಕಬಳಿಸಿ ಸಂಭ್ರಮಿಸಿದ್ದರು. ಆದರೆ ಸಂಭ್ರಮಾಚರಣೆ ನಿಯಮ ಮೀರಿತ್ತು. ಜೊತೆಗೆ ಅವಾಚ್ಯ ಶಬ್ದಗಳನ್ನ ಬಳಿಸಿದ್ದಾರೆ ಎಂದು ಐಸಿಸಿ ಪಂದ್ಯದ ಶೇಕಡಾ 15 ರಷ್ಟು ದಂಡ ವಿಧಿಸಿದೆ.

ಈ ಮೂಲಕ ಇಶಾಂತ್ ಶರ್ಮಾ ಐಸಿಸಿ ಕೋಡ್ 2.1.7 ನಿಯಮ ಉಲ್ಲಂಘಿಸಿದ್ದಾರೆ. 3 ದಿನದಾಟದ ಬಳಿಕ  ಮ್ಯಾಚ್ ರೆಫ್ರಿ ಜೆಫ್ ಕ್ರೊವ್ , ಇಶಾಂತ್ ಶರ್ಮಾಗೆ ಎಚ್ಚರಿಕೆ ನೀಡಿದ್ದರು. ಇದೀಗ ಶೇಕಡಾ 15 ರಷ್ಟು ದಂಡ  ವಿಧಿಸಿದೆ. ಪಂದ್ಯ ಸೋತ ಬೆನ್ನಲ್ಲೇ, ಇಶಾಂತ್ ಶರ್ಮಾಗೆ  ಗಾಯದ ಮೇಲೆ ಬರೆ ಎಳೆದಂತಾಗಿದೆ.

loader