ಆಂಗ್ಲರ 7 ನೇ ವಿಕೆಟ್ ಪತನ- ಐತಿಹಾಸಿಕ ಸಾಧನೆಯತ್ತ ಭಾರತ

First Published 3, Aug 2018, 6:35 PM IST
India vs england test host in deep trouble against kohli boys
Highlights

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 3ನೇ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಭಾರತ, ಇಂಗ್ಲೆಂಡ್ ಆರ್ಭಟಕ್ಕೆ ಬ್ರೇಕ್ ಹಾಕಿದೆ. ಈ ರೋಚಕ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.
 

ಎಡ್ಜ್‌ಬಾಸ್ಟನ್(ಆ.03): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಗಹಾಸಿಕ ಸಾಧನೆಯತ್ತ ದಾಪುಗಾಲಿಟ್ಟಿದೆ. ಇಂಗ್ಲೆಂಡ್ ತಂಡವನ್ನ ಅಲ್ಪಮೊತ್ತಕ್ಕೆ ಆಲೌಟ್ ಮಾಡಲು ತುದಿಗಾಲ್ಲಿ ನಿಂತಿರುವ ಭಾರತ, ಈಗಾಗಲೇ 7 ವಿಕೆಟ್ ಕಬಳಿಸಿದೆ.

2ನೇ ದಿನ ಆಲಿಸ್ಟೈರ್ ಕುಕ್ ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್, ಇಂದು 8 ರನ್  ಸಿಡಿಸಿದ ಕೆಟನ್ ಜೆನ್ನಿಂಗ್ಸ್ ವಿಕೆಟ್ ಕಬಳಿಸಿದರು. ನಾಯಕ ಜೋ ರೂಟ್ 14 ರನ್ ಸಿಡಿಸಿ ಔಟಾದರು. ಈ ಮೂಲಕ  ಅಶ್ವಿನ್ 3 ವಿಕೆಟ್ ಕಬಳಿಸಿದರು. 

ಅಶ್ವಿನ್ ಸ್ಪಿನ್ ಮೋಡಿ ಬಳಿಕ ವೇಗಿ ಇಶಾಂತ್ ಶರ್ಮಾ ದಾಳಿ ಆರಂಭಿಸಿದರು. ಡೇವಿಡ್ ಮಲಾನ್ 20 ರನ್ ಸಿಡಿಸಿ ಔಟಾದರು. ಜಾನಿ ಬೈರಿಸ್ಟೋ ಕೂಡ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಇಶಾಂತ್ 4 ವಿಕೆಟ್ ಕಬಳಿಸಿದರು. ಸದ್ಯ ಇಂಗ್ಲೆಂಡ್  96 ರನ್‌ಗೆ 7 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ 109 ರನ್ ಮುನ್ನಡೆ ಪಡೆದುಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 287 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 274 ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 13 ರನ್ ಮುನ್ನಡೆ ಸಾಧಿಸಿತ್ತು. 
 

loader