ನಾಟಿಂಗ್‌ಹ್ಯಾಮ್(ಆ.19): 3ನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನ 329ರನ್‌ಗೆ ಆಲೌಟ್ ಮಾಡಿದ ಇಂಗ್ಲೆಂಡ್ ಇದೀಗ ಮೊದಲ ಇನ್ನಿಂಗ್ಸ್‌‌ನಲ್ಲಿ 161 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ168 ರನ್ ಮುನ್ನಡೆ ಪಡೆದುಕೊಂಡಿದೆ.

ಆರಂಭಿಕರಾದ ಕುಕ್ ಹಾಗೂ ಜೆನ್ನಿಂಗ್ಸ್ 54 ರನ್‌ಗಳ ಜೊತೆಯಾಟ ನೀಡೋ ಮೂಲಕ ಭಾರತಕ್ಕೆ ಅಪಾಯದ ಸೂಚನೆ ನೀಡಿದ್ದರು. ಆದರೆ ಇಶಾಂತ್ ಶರ್ಮಾ ಹಾಗೂ ಜಸ್‌ಪ್ರೀತ್ ಬುಮ್ರಾ ದಾಳಿಗೆ ಆರಂಭಿಕರ ವಿಕೆಟ್ ಪತನಗೊಂಡಿತು. ಒಲ್ಲಿ ಪೋಪ್ ಕೇವಲ 10 ರನ್ ಸಿಡಿಸಿ ಔಟಾದರು.   ನಾಯಕ ಜೋ ರೂಟ್ 16 ರನ್ ಸಿಡಿಸಿ, ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್ 10, ಜಾನಿ ಬೈರ್‌ಸ್ಟೋ 15 ರನ್ ಸಿಡಿಸಿ ಔಟಾದರು. ಲಾರ್ಡ್ಸ್ ಪಂದ್ಯದಲ್ಲಿ ಶತಕ ಸಿಡಿಸಿದ ಕ್ರಿಸ್ ವೋಕ್ಸ್ 8 ರನ್ ಸಿಡಿಸಿ ಔಟಾದರು. 

ಜೋಸ್ ಬಟ್ಲರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬಟ್ಲರ್ 39 ರನ್ ಸಿಡಿಸಿ ಔಟಾದರು. ಈ ಮೂಲಕ ಇಂಗ್ಲೆಂಡ್ 161 ರನ್‌ಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ 168 ರನ್ ಮುನ್ನಡೆ ಪಡೆಯಿತು. ಹಾರ್ದಿಕ್ ಪಾಂಡ್ಯ 5 ವಿಕೆಟ್ ಪಡೆದು ಮಿಂಚಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 329 ರನ್‌ಗೆ ಆಲೌಟ್ ಆಯಿತು. ಆರಂಭಿಕರಾದ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ 60 ರನ್‌ಗಳ ಜೊತೆಯಾಟ ನೀಡಿದ್ದರು. ಇನ್ನು ನಾಯಕ ವಿರಾಟ್ ಕೊಹ್ಲಿ 97 ರನ್ ಸಿಡಿಸಿದರೆ,  ಅಜಿಂಕ್ಯ ರಹಾನೆ 81 ರನ್ ಕಾಣಿಕೆ ನೀಡಿದ್ದರು.  

ಮಳೆಯಿಂದಾಗಿ ದ್ವಿತೀಯ ದಿನದಾಟ ಅಲ್ಪ ತಡವಾಗಿ ಆರಂಭಗೊಂಡಿತು. ರಿಷಬ್ ಪಂತ್ 24, ಆರ್ ಅಶ್ವಿನ 14 ರನ್ ಸಿಡಿಸಿ ಔಟಾದರು. ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರೀತ್ ಬುಮ್ರಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಹೀಗಾಗಿ ಭಾರತ 329 ರನ್‌ಗೆ ಆಲೌಟ್ ಆಯಿತು. ಜೇಮ್ಸ್ ಆಂಡರ್ಸನ್, ಕ್ರಿಸ್ ವೋಕ್ಸ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ 3 ವಿಕೆಟ್ ಪಡೆದು ಮಿಂಚಿದರು.