ಭಾರತ-ಇಂಗ್ಲೆಂಡ್ ಟೆಸ್ಟ್: ಆಲಿಸ್ಟೈರ್ ಕುಕ್ ವಿಕೆಟ್ ಕಬಳಿಸಿದ ಅಶ್ವಿನ್

First Published 1, Aug 2018, 4:32 PM IST
India vs england test Ashwin sends Cook back
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಗೊಂಡಿದೆ. ಮೊದಲ ಟೆಸ್ಟ್ ಪಂದ್ಯದ ಆರಂಭದಲ್ಲೇ ಭಾರತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

ಬರ್ಮಿಂಗ್‌ಹ್ಯಾಮ್(ಆ.01): ಭಾರತ ವಿರುದ್ದದ  ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿದೆ. ವೇಗಿಗಳಿಗೆ ನೆರವು ನೀಡೋ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಮೇಲುಗೈ ಸಾಧಿಸಿದ್ದಾರೆ.

ಆಲಿಸ್ಟೈರ್ ಕುಕ್ ನೆಚ್ಚಿನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಅಬ್ಬರಿಸಲು ಸಾಧ್ಯವಾಗಿಲ್ಲ. ಕುಕ್ ಕೇವಲ 13 ರನ್‌ಗಳಿಸಿ ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ 26 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಪತನಗೊಂಡಿದೆ.

ಇಂಗ್ಲೆಂಡ್ ತಂಡ ಸ್ಪಿನ್ನರ್ ಆಗಿ ಆದಿಲ್ ರಶೀದ್‌ಗೆ ಸ್ಥಾನ ನೀಡಿದರೆ, ಇನ್ನು ಬೆನ್ ಸ್ಟೋಕ್ಸ್ ಸೇರಿದಂತೆ ನಾಲ್ವರು ವೇಗಿಗಳನ್ನ ಕಣಕ್ಕಿಳಿಸಿದ್ದಾರೆ. ಇಂಗ್ಲೆಂಡ್‌ಗೆ ತಕ್ಕ ತಿರುಗೇಟು ನೀಡಿರುವ ಭಾರತ ಸ್ಪಿನ್ ವಿಭಾಗದಲ್ಲಿ ಆರ್ ಅಶ್ವಿನ್‌ಗೆ ಸ್ಥಾನ ನೀಡಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ನಾಲ್ವರು ವೇಗಿಗಳಿಗೆ ಅವಕಾಶ ನೀಡಿದೆ.

ಇದನ್ನು ಓದಿ: ಭಾರತ-ಇಂಗ್ಲೆಂಡ್ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ
 

loader