Asianet Suvarna News Asianet Suvarna News

ಭಾರತ-ಇಂಗ್ಲೆಂಡ್ ಟೆಸ್ಟ್: ಮೊದಲ ದಿನ ಟೀಂ ಇಂಡಿಯಾಗೆ ಭರ್ಜರಿ ಮೇಲುಗೈ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಹೋರಾಟ ಅಭಿಮಾನಿಗಳ ಕುತೂಹಲವನ್ನ ಇಮ್ಮಡಿಗೊಳಿಸಿದೆ.  ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಮೊದಲ ದಿನದ ಹೋರಾಟ ಹೇಗಿತ್ತು? ಇಲ್ಲಿದೆ ಅಪ್‌ಡೇಟ್ಸ್.

India vs england test Ashwin four-fer leads India to top
Author
Bengaluru, First Published Aug 1, 2018, 11:11 PM IST

ಎಡ್ಜ್‌ಬಾಸ್ಟನ್(ಆ.01): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಆರಂಭದಲ್ಲಿ ಇಂಗ್ಲೆಂಡ್ ಹೋರಾಟ ನೀಡಿದರೂ, ದಿನದಾಟದ ಅಂತ್ಯದಲ್ಲಿ ಆಂಗ್ಲರ 9 ವಿಕೆಟ್ ಕಬಳಿಸುವಲ್ಲಿ ಕೊಹ್ಲಿ ಸೈನ್ಯ ಯಶಸ್ವಿಯಾಗಿದೆ.  

 

 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಆರಂಭದಲ್ಲೇ ಹಿರಿಯ ಬ್ಯಾಟ್ಸ್‌ಮನ್ ಆಲಿಸ್ಟೈರ್ ಕುಕ್ ವಿಕೆಟ್ ಕಳೆದುಕೊಂಡಿತು. ಕುಕ್ ವಿಕೆಟ್ ಕಬಳಿಸಿದ ಆರ್ ಅಶ್ವಿನ್ ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದರು. ಮೊದಲ ವಿಕೆಟ್ ಪತನದ ನಂತರ ಇಂಗ್ಲೆಂಡ್ ತಂಡ ಚೇತರಿಕೆ ಕಂಡಿತು. ಕೇಟನ್ ಜೆನ್ನಿಂಗ್ಸ್ ಹಾಗೂ ನಾಯಕ ಜೋ ರೂಟ್ 72 ರನ್ ಜೊತೆಯಾಟ ನೀಡಿದರು. 42 ರನ್ ಸಿಡಿಸಿ ಅರ್ಧಶತದತ್ತ ಮುನ್ನಗ್ಗುತ್ತಿದ್ದ ಜೆನ್ನಿಂಗ್ಸ್, ಮೊಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಡೇವಿಡ್ ಮಲಾನ್ ಕೇವಲ 8 ರನ್‌ಗಳಿಸಿ ಔಟಾದರು.

ನಾಯಕ ಜೋ ರೂಟ್ ಹಾಗೂ ಜಾನಿ ಬೈರಿಸ್ಟೋ ಜೊತೆಯಾಟದಿಂದ ಇಂಗ್ಲೆಂಡ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಜೋ ರೂಟ್ 40 ರನ್ ಪೂರೈಸುತ್ತಿದ್ದಂತೆ, ಟೆಸ್ಟ್ ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಿ ದಾಖಲೆ ಬರೆದರು.

ಜೋ ರೂಟ್ ಹಾಗೂ ಬೈರಿಸ್ಟೋ ಅರ್ಧಶತಕದಿಂದ ಭಾರತ ಬೌಲರ್‌ಗಳು ಸುಸ್ತಾದರು. ಸೆಂಚುರಿಯತ್ತ ಸಾಗುತ್ತಿದ್ದ ಜೋ ರೂಟ್ 80  ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಈ ಮೂಲಕ ಇಂಗ್ಲೆಂಡ್ ತಂಡ ನಾಲ್ಕನೇ ವಿಕೆಟ್ ಕಳೆದುಕೊಂಡಿತು. 

ರೂಟ್ ಬೆನ್ನಲ್ಲೇ, ಜಾನಿ ಬೈರಿಸ್ಟೋ 70 ರನ್ ಸಿಡಿಸಿ ಔಟಾದರು. ಜೋಸ್ ಬಟ್ಲರ್ ಡಕೌಟ್ ಆದರು. ಬೆನ್ ಸ್ಟೋಕ್ಸ್ ಆಟ 21 , ಆದಿಲ್ ರಶೀದ್ 13 ಹಾಗೂ ಸ್ಟುವರ್ಟ್ ಬ್ರಾಡ್ 1 ರನ್ ಸಿಡಿಸಿ ಔಟಾದರು.  ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 285 ರನ್ ಸಿಡಿಸಿತು.  ಸ್ಯಾಮ್ ಕುರ್ರನ್ ಅಜೇಯ 24 ಹಾಗೂ ಜೇಮ್ಸ್ ಆಂಡರ್ಸನ್ ಕ್ರೀಸ್ ಕಾಯ್ದುಕೊಂಡಿದ್ದಾರೆ.  ಆರ್ ಅಶ್ವಿನ್ 4, ಮೊಹಮ್ಮದ್ ಶಮಿ 2 ಹಾಗೂ ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ತಲಾ 1 ವಿಕೆಟ್ ಪಡೆದು ಮಿಂಚಿದರು

Follow Us:
Download App:
  • android
  • ios