ಸೌತಾಂಪ್ಟನ್(ಸೆ.01): ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ತೃತೀಯ ದಿನದ ಆರಂಭದಲ್ಲೇ ಭಾರತ ಮೇಲುಗೈ ಸಾಧಿಸಿದೆ. ಇಂದು 2ನೇ ಇನ್ನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ 24 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿದೆ.

ಭಾರತ ವಿರುದ್ಧ 4 ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕ ಆಲಿಸ್ಟೈರ್ ಕುಕ್ ಕಳಪೆ ಪ್ರದರ್ಶನ ಮುಂದುವರಿದಿದೆ. ಕುಕ್ 12 ರನ್ ಸಿಡಿಸಿ ಜಸ್‌ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ಇಂಗ್ಲೆಂಡ್ ತಂಡವನ್ನ ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಆಲೌಟ್ ಮಾಡಿ ಭಾರತ 273 ರನ್ ಸಿಡಿಸಿತ್ತು. ಈ ಮೂಲಕ 27 ರನ್ ಮುನ್ನಡೆ ಪಡೆದುಕೊಂಡಿತ್ತು.