ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ 194 ರನ್ ಟಾರ್ಗೆಟ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 8:20 PM IST
India vs england test 194 runs target for team india
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ 3ನೇ ದಿನ ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸಿದ ಕೊಹ್ಲಿ ಸೈನ್ಯ ಇದೀಗ ಬ್ಯಾಟಿಂಗ್‌ನಲ್ಲಿ ಎಚ್ಚರಿಕೆ ವಹಿಸಬೇಕಿದೆ. ಇಂಗ್ಲೆಂಡ್ ತಂಡವನ್ನ 180 ರನ್‌ಗಳಿಗೆ ಆಲೌಟ್ ಮಾಡಿದ ಭಾರತ 194 ರನ್ ಟಾರ್ಗೆಟ್ ಪಡೆದಿದೆ. ಈ ರೋಚಕ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

ಎಡ್ಜ್‌ಬಾಸ್ಟನ್(ಆ.03): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪುತ್ತಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನ 180 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಗೆಲುವಿಗಾಗಿ 194 ರನ್ ಟಾರ್ಗೆಟ್ ಪಡೆದಿದೆ.

 

 

2ನೇ ದಿನ ಆಲಿಸ್ಟೈರ್ ಕುಕ್ ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್, ಇಂದು 8 ರನ್  ಸಿಡಿಸಿದ ಕೆಟನ್ ಜೆನ್ನಿಂಗ್ಸ್ ವಿಕೆಟ್ ಕಬಳಿಸಿದರು. ನಾಯಕ ಜೋ ರೂಟ್ 14 ರನ್ ಸಿಡಿಸಿ ಔಟಾದರು. ಅಶ್ವಿನ್ ಸ್ಪಿನ್ ಮೋಡಿ ಬಳಿಕ ವೇಗಿ ಇಶಾಂತ್ ಶರ್ಮಾ ದಾಳಿ ಆರಂಭಿಸಿದರು. ಡೇವಿಡ್ ಮಲಾನ್ 20 ರನ್ ಸಿಡಿಸಿ ಔಟಾದರು. ಜಾನಿ ಬೈರಿಸ್ಟೋ ಕೂಡ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. 

7 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡಕ್ಕೆ ಸ್ಯಾಮ್ ಕುರ್ರನ್ ಆಸರೆಯಾದರು. ಇತ್ತ ಆದಿಲ್ ರಶೀದ್ 16 ರನ್ ಸಿಡಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಕುರ್ರನ್ ಮಾತ್ರ ಟೀಂ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದರು. ಆಕರ್ಷಕ ಅರ್ಧಶತಕ ಸಿಡಿಸಿ ಇಂಗ್ಲೆಂಡ್‌ಗೆ ಭರ್ಜರಿ ಮುನ್ನಡೆ ತಂದುಕೊಟ್ಟರು.

ಸ್ಟುವರ್ಟ್ ಬ್ರಾಡ್ 11 ರನ್‌ ಸಿಡಿಸಿ ನಿರ್ಗಮಿಸಿದರು. ಅಬ್ಬರಿಸಿದ ಸ್ಯಾಮ್ ಕುರ್ರನ್ 63 ರನ್ ಸಿಡಿಸಿ ಔಟಾದರು. ಇದರೊಂದಿಗೆ ಇಂಗ್ಲೆಂಡ್ 180 ರನ್‌ಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನ 13 ರನ್ ಮುನ್ನಡೆಯಿಂದಾಗಿ ಭಾರತಕ್ಕೆ 194 ರನ್ ಟಾರ್ಗೆಟ್ ನೀಡಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಇಶಾಂತ್ ಶರ್ಮಾ 5, ಆರ್ ಅಶ್ವಿನ್ 3 ಹಾಗೂ ಉಮೇಶ್ ಯಾದವ್ 2 ವಿಕೆಟ್ ಕಬಳಿಸಿದರು. 

loader