ಟೀಂ ಇಂಡಿಯಾಗೆ ಮತ್ತೆ ಕೊಹ್ಲಿ ಆಸರೆ-ಗೆಲುವಿಗೆ ಬೇಕಿದೆ 84 ರನ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 11:30 PM IST
India vs england team india need 84 runs to win
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ತಿರುವು ಪೆಡೆದುಕೊಳ್ಳೋ ಸಾಧ್ಯತೆ ಇದೆ. 194 ರನ್ ಸುಲಭ ಗುರಿ ಬೆನ್ನಟ್ಟಲು ಕಣಕ್ಕಿಳಿದ ಭಾರತ ತಂಡ ದಿಢೀರ್ 5 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಆದರೆ ಮತ್ತೆ ಆಸರೆಯಾದ ನಾಯಕ ವಿರಾಟ್ ಕೊಹ್ಲಿ ಗೆಲುವಿಗಾಗಿ ದಿಟ್ಟ ಹೋರಾಟ ನೀಡುತ್ತಿದ್ದಾರೆ. ಇಲ್ಲಿದೆ 3ನೇ ದಿನದ ಅಪ್‌ಡೇಟ್ಸ್.

ಎಡ್ಜ್‌ಬಾಸ್ಟನ್(ಆ.03): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪುತ್ತಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನ 180 ರನ್‌ಗಳಿಗೆ ಆಲೌಟ್ ಮಾಡಿ, 194 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ, ತೃತೀಯ ದಿನದಾಟದ ಅಂತ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 110 ರನ್ ಪೇರಿಸಿತು. ಗೆಲುವಿಗಾಗಿ ಭಾರತ ಇನ್ನು 84 ರನ್‌ಗಳಿಸಬೇಕಿದೆ.

 

 

ಸುಲಭ ಗುರಿ ಬೆನ್ನಟ್ಟಲು ಕಣಕ್ಕಿಳಿದ ಟೀಂ ಇಂಡಿಯಾ, 22 ರನ್‌ಗಳಿಸುವಷ್ಟರಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ. ಮುರಳಿ ವಿಜಯ್ 6 ಹಾಗೂ ಶಿಖರ್ ಧವನ್ 13 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಇನ್ನು ಕನ್ನಡಿಗ ಕೆಎಲ್ ರಾಹುಲ್ 13 ರನ್ ಸಿಡಿಸಿ ಔಟಾದರು.

ಮೊದಲ ಇನ್ನಿಂಗ್ಸ್ ರೀತಿಯಲ್ಲೇ ಎರಡನೇ ಇನ್ನಿಂಗ್ಸ್‌ನಲ್ಲೂ ಭಾರತೀಯ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ಆರಂಭಿಸಿದ್ದರು. ನಾಯಕ ವಿರಾಟ್ ಕೊಹ್ಲಿ ಮತ್ತೆ ತಂಡಕ್ಕೆ ಆಸೆರೆಯಾದರು. ಆದರೆ ಒಂದೆಡೆ ಕೊಹ್ಲಿ ದಿಟ್ಟ ಹೋರಾಟ ನೀಡಿದರೆ, ಮತ್ತೊಂದೆಡೆ ವಿಕೆಟ್ ಪತನ ಮಾತ್ರ ನಿಲ್ಲಲಿಲ್ಲ.

ಅಜಿಂಕ್ಯ ರಹಾನೆ ಹಾಗೂ ಆರ್ ಅಶ್ವಿನ್ ವಿಕೆಟ್ ಪತನದೊಂದಿದೆ ಟೀಂ ಇಂಡಿಯಾ ಗೆಲುವಿನ ಹಾದಿ ಮತ್ತಷ್ಟು ಕಠಿಣವಾಯಿತು. ಆದರೆ ವಿರಾಟ್ ಕೊಹ್ಲಿ ಹೋರಾಟದಿಂದ ಟೀಂ ಇಂಡಿಯಾ ಮತ್ತೆ ತಿರುಗೇಟು ನೀಡಿತು.

ದಿನದಾಟದ ಅಂತ್ಯದಲ್ಲಿ ನಾಯಕ ವಿರಾಟ್ ಅಜೇಯ 43 ರನ್ ಸಿಡಿಸಿದರೆ. ದಿನೇಶ್ ಕಾರ್ತಿಕ್ ಅಜೇಯ 18 ರನ್ ಬಾರಿಸಿದ್ದಾರೆ. ಈ ಮೂಲಕ ಭಾರತ ತೃತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 110 ರನ್ ಪೇರಿಸಿತು. ಗೆಲುವಿಗಾಗಿ ಭಾರತ ಇನ್ನು 84 ರನ್‌ಗಳಿಸಬೇಕಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 287 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ 274 ರನ್‌ಗೆ ಆಲೌಟ್ ಆಗಿತ್ತು. ನಾಯಕ ವಿರಾಟ್ ಕೊಹ್ಲಿ 149 ರನ್ ಸಿಡಿಸಿ ಮಿಂಚಿದ್ದರು. 13 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 180 ರನ್‌ಗಳಿಗೆ ಆಲೌಟ್ ಆಯಿತು.

loader