ಭಾರತ-ಇಂಗ್ಲೆಂಡ್ ಏಕದಿನ: ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ

First Published 12, Jul 2018, 10:54 PM IST
India vs England rohit brings up fifty as india stay in control
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಆರಂಭದಲ್ಲೇ ಕುತೂಹಲ ಮೂಡಿಸಿದೆ. ಇಂಗ್ಲೆಂಡ್ ನೀಡಿದ 269 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ಬ್ಯಾಟಿಂಗ್ ಹೇಗಿದೆ? ಇಲ್ಲಿದೆ ವಿವರ.

ನಾಟಿಂಗ್‌ಹ್ಯಾಮ್(ಜು.12): ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 269 ರನ್ ಗುರಿ ಬೆನ್ನಟ್ಟಲು ಕಣಕ್ಕಿಳಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಆಸರೆಯಾಗಿದ್ದಾರೆ. ರೋಹಿತ್ ಶರ್ಮಾ 35ನೇ ಅರ್ಧಶತಕ ಸಿಡಿಸಿದ್ದಾರೆ.

 

 

ಉತ್ತಮ ಆರಂಭ ನೀಡಿದ ಶಿಖರ್ ಧವನ್ 40  ರನ್ ಸಿಡಿಸಿ ಔಟಾದರು. ಬಳಿಕ  ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು.  

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಕುಲದೀಪ್ ಸ್ಪಿನ್ ಮೋಡಿಯಿಂದ 49.5 ಓವರ್‌ಗಳಲ್ಲಿ 268 ರನ್‌ಗೆ ಆಲೌಟ್ ಆಯಿತು. ಕುಲದೀಪ್ ಯಾದವ್ ಸ್ಪಿನ್ ದಾಳಿಯಿಂದ ಜೇಸನ್ ರಾಯ್,  ಜಾನಿ ಬೈರಿಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಹಾಗೂ ಡೇವಿಡ್ ವಿಲೆ ವಿಕೆಟ್ ಕಬಳಿಸಿದರು. 

loader