Asianet Suvarna News Asianet Suvarna News

ಕೊಹ್ಲಿ- ರೋಹಿತ್ ಅರ್ಧಶತಕ-ಗೆಲುವಿನತ್ತ ಭಾರತ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಆರಂಭದಲ್ಲೇ ಕುತೂಹಲ ಮೂಡಿಸಿದೆ. ಇಂಗ್ಲೆಂಡ್ ನೀಡಿದ 269 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ಬ್ಯಾಟಿಂಗ್ ಹೇಗಿದೆ? ಇಲ್ಲಿದೆ ವಿವರ.
 

India vs England rohit and kohli brings up fifty as india stay in control

ನಾಟಿಂಗ್‌ಹ್ಯಾಮ್(ಜು.12): ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 269 ರನ್ ಗುರಿ ಬೆನ್ನಟ್ಟಲು ಕಣಕ್ಕಿಳಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಸರೆಯಾಗಿದ್ದಾರೆ. ರೋಹಿತ್ ಹಾಗೂ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ಉತ್ತಮ ಆರಂಭ ನೀಡಿದ ಶಿಖರ್ ಧವನ್ 40  ರನ್ ಸಿಡಿಸಿ ಔಟಾದರು. ಬಳಿಕ  ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು.   ರೋಹಿತ್ ಶರ್ಮಾ 35ನೇ ಹಾಫ್ ಸೆಂಚುರಿ ಸಿಡಿಸಿದರೆ, ಕೊಹ್ಲಿ 47ನೇ ಅರ್ಧಶತಕ ಸಿಡಿಸಿದರು. ಈ ಮೂಲಕ ಭಾರತ 175 ರನ್ ಗಡಿ ದಾಟಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಕುಲದೀಪ್ ಸ್ಪಿನ್ ಮೋಡಿಯಿಂದ 49.5 ಓವರ್‌ಗಳಲ್ಲಿ 268 ರನ್‌ಗೆ ಆಲೌಟ್ ಆಯಿತು. ಕುಲದೀಪ್ ಯಾದವ್ ಸ್ಪಿನ್ ದಾಳಿಯಿಂದ ಜೇಸನ್ ರಾಯ್,  ಜಾನಿ ಬೈರಿಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಹಾಗೂ ಡೇವಿಡ್ ವಿಲೆ ವಿಕೆಟ್ ಕಬಳಿಸಿದರು. 

Follow Us:
Download App:
  • android
  • ios