ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಭವಿಷ್ಯ ನುಡಿದ ರಾಹುಲ್ ದ್ರಾವಿಡ್

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 31, Jul 2018, 8:37 PM IST
India vs England Rahul Dravid Predicts a 2-1 Series Win for India in England
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಫಲಿತಾಂಶದ ಕುರಿತು ಭವಿಷ್ಯ ನುಡಿದ್ದಾರೆ. ದ್ರಾವಿಡ್ ಹೇಳಿರೋ ಭವಿಷ್ಯ ಹೇಗಿದೆ? ಇಲ್ಲಿದೆ ವಿವರ.

ಲಂಡನ್(ಜು.31): ಭಾರತ ಹಾಗೂ  ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ನಾಳೆಯಿಂದ(ಆ.1)ಆರಂಭಗೊಳ್ಳಲಿರುವ ಮೊದಲ ಟೆಸ್ಟ್ ಪಂದ್ಯ ಇದೀಗ ಕುತೂಹಲಗಳ ಕೇಂದ್ರ ಬೀಂದುವಾಗಿದೆ. ಇಂಗ್ಲೆಂಡ್ ಈಗಾಗಲೇ ಪ್ಲೇಯಿಂಗ್ 11 ಕೂಡ ಪ್ರಕಟಿಸಿದೆ.

ಉಭಯ ತಂಡಗಳು ಭರ್ಜರಿ ಸಿದ್ದತೆ ನಡೆಸಿದೆ. ಜೊತೆಗೆ ಯಾರು ಗೆಲುವು ಸಾಧಿಸುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಭವಿಷ್ಯ ನುಡಿದಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಭಾರತ ಕೊನೆಯ ಬಾರಿಗೆ ಸರಣಿ ಗೆದ್ದಿದ್ದು ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ. 2007ರಲ್ಲಿ ದ್ರಾವಿಡ್ ನಾಯಕತ್ವದ ಟೀಂ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಯನ್ನ 1-0 ಅಂತರದಲ್ಲಿ ಗೆದ್ದು ದಾಖಲೆ ಬರೆದಿತ್ತು. ಇದೀಗ ದ್ರಾವಿಡ್ ಈ ಬಾರಿಯ ಫಲಿತಾಂಶದ ಭವಿಷ್ಯ ಹೇಳಿದ್ದಾರೆ.

ದ್ರಾವಿಡ್ ಪ್ರಕಾರ ಈ ಬಾರಿ ಸರಣಿಯನ್ನ ಭಾರತ ಗೆಲ್ಲಲಿದೆ. ಟೀಂ ಇಂಡಿಯಾ 2-1 ಅಂತರದಲ್ಲಿ ಗೆಲ್ಲಲಿದೆ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ದ್ರಾವಿಡ್ ಭವಿಷ್ಯ ನುಡಿದಿದ್ದಾರೆ. ಕಾರಣ ಭಾರತ ಬ್ಯಾಟಿಂಗ್ ಜೊತೆಗೆ ಅತ್ಯುತ್ತಮ ಬೌಲಿಂಗ್ ಅಟ್ಯಾಕ್ ಹೊಂದಿದೆ ಎಂದು ದ್ರಾವಿಡ್ ಹೇಳಿದ್ದಾರೆ.
 

loader