ಎಡ್ಜ್‌ಬಾಸ್ಟನ್(ಆ.03): ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ತೃತೀಯ ದಿನದ ಆರಂಭದಲ್ಲೇ ಇಂಗ್ಲೆಂಡ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ದ್ವಿತೀಯ ದಿನದಾಟದ ಅಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 9 ರನ್  ಸಿಡಿಸಿದ್ದ ಇಂಗ್ಲೆಂಡ್ ಇಂದು ಇನ್ನಿಂಗ್ಸ್ ಮುಂದುವರಿಸಿತು.

2ನೇ ದಿನ ಆಲಿಸ್ಟೈರ್ ಕುಕ್ ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್, ಇಂದು 8 ರನ್  ಸಿಡಿಸಿದ ಕೆಟನ್ ಜೆನ್ನಿಂಗ್ಸ್ ವಿಕೆಟ್ ಕಬಳಿಸಿದರು. 18 ರನ್‌ಗೆ ಇಂಗ್ಲೆಂಡ್ ತಂಡದ 2ನೇ ವಿಕೆಟ್ ಪತನಗೊಂಡಿದೆ.

 

 

ಆರ್ ಅಶ್ವಿನ್ ಸ್ಪಿನ್ ಮೋಡಿಯಿಂದ ಭಾರತ 3ನೇ ದಿನದಾಟದ ಆರಂಭದಲ್ಲೇ ಮೇಲುಗೈ ಸಾಧಿಸಿದೆ. ಆಂಗ್ಲರನ್ನ ಆದಷ್ಟು ಬೇಗ ಆಲೌಟ್ ಮಾಡಿ, ಟಾರ್ಗೆಟ್ ಚೇಸ್ ಮಾಡಲು ಟೀಂ ಇಂಡಿಯಾ ಮಾಸ್ಟರ್ ಪ್ಲಾನ್ ರೆಡಿಮಾಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 287 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 274 ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 13 ರನ್ ಮುನ್ನಡೆ ಸಾಧಿಸಿತ್ತು.