ಮೆಲ್ಬರ್ನ್(ಡಿ.29): ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಿನ್ನಡೆ ಅನುಭವಿಸುತ್ತಿದ್ದಂತೆ ಅಭಿಮಾನಿಗಳ ಹುಚ್ಚಾಟ ಹೆಚ್ಚಾಗಿದೆ. ಫೀಲ್ಡಿಂಗ್ ಮಾಡುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನ ಜನಾಂಗೀಯ ನಿಂದನೆ ಮಾಡಿದ ಆರೋಪಕ್ಕೆ ಆಸಿಸ್ ಅಭಿಮಾನಿಗಳು ಗುರಿಯಾಗಿದ್ದಾರೆ. 

ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್: ಗೆಲುವಿನ ಸನಿಹದಲ್ಲಿ ಟೀಂ ಇಂಡಿಯಾ!

ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಹಲವು ದೂರುಗಳು ಬಂದಿದೆ. ಇಷ್ಟೇ ಅಲ್ಲ ಪೂರ ವೀಡಿಯೋ ಫೋಟೇಜ್ ಕೂಡ ನೀಡಲಾಗಿದೆ. ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಆರಂಭಿಕ 2 ದಿನದಲ್ಲಿ ಆಸ್ಟ್ರೇಲಿಯಾ ಅಭಿಮಾನಿಗಳು ಕೆಟ್ಟ ಪದ ಬಳಕೆ ಪ್ರಯೋಗ, ನಿಂದನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕರಣವನ್ನ ವಿಕ್ಟೋರಿಯಾ ಪೊಲೀಸರಿಗೆ ವರ್ಗಾಯಿಸಿದ್ದಾರೆ.

ಇದನ್ನೂ ಓದಿ: ಬಾಲ್ ಟ್ಯಾಂಪರಿಂಗ್ ಮಾಸ್ಟರ್ ಮೈಂಡ್ ವಾರ್ನರ್ ಅಂತೆ..!

ತನಿಖೆ ಆರಂಭಿಸಿರುವ ಪೊಲೀಸರು ವೀಡಿಯೋ ದೃಶ್ಯಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲ ಮೆಲ್ಬರ್ನ್ ಕ್ರೀಡಾಂಗಣದ ಸೆಕ್ಯೂರಿಟಿ ಜೊತೆಗೂ ಮಾತುಕತೆ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ. ಇದೇ ವೇಳೆ ಕ್ರಿಕೆಟ್ ಆಸ್ಟ್ರೇಲಿಯಾ , ಆಸಿಸ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದೆ. ಯಾವುದೇ ರೀತಿ ಪ್ರಚೋದನೆ ನೀಡುವ, ನಿಂದಿಸುವ ಮಾತುಗಳನ್ನ ಆಡದಂತೆ ಸೂಚಿಸಿದೆ. 

ಇದನ್ನೂ ಓದಿ: ಮಯಾಂಕ್ ಅಗರ್'ವಾಲ್ ಬ್ಯಾಟಿಂಗ್’ಗೆ ಮನಸೋತ ಟ್ವಿಟರಿಗರು

MCG ಸೌಥರ್ನ್ ಸ್ಟಾಂಡ್‌ನಲ್ಲಿದ್ದ ಕೆಲ ಆಸಿಸ್ ಅಭಿಮಾನಿಗಳು ಈ ರೀತಿ ಮಾಡಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಸದ್ಯ ಪೊಲೀಸರು ಈ ಕುರಿತು ನಿಗಾವಹಿಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.