ಆಡಿಲೆಡ್(ಜ.15): ಆಸ್ಟ್ರೇಲಿಯಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಕ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ಬೌಲರ್‌ಗಳು ಶಾಕ್ ನೀಡಿದ್ದಾರೆ. ಪ್ರಮುಖ 4 ವಿಕೆಟ್ ಕಳೆದುಕೊಂಡಿರುವ ಆಸಿಸ್ ತಂಡಕ್ಕೆ ಶಾನ್ ಮಾರ್ಶ್ ಆಸರೆಯಾಗಿದ್ದಾರೆ.

ಇದನ್ನೂ ಓದಿ: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ-1 ಬದಲಾವಣೆ ಮಾಡಿದ ಕೊಹ್ಲಿ

ಮೊದಲ ಪಂದ್ಯದ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಆಸ್ಟ್ರೇಲಿಯಾ ದ್ವಿತೀಯ ಪಂದ್ಯದಲ್ಲಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಆ್ಯರೋನ್ ಫಿಂಚ್ ಕೇವಲ 6 ರನ್ ಸಿಡಿಸಿ ಔಟಾದರು. ಇನ್ನು ಅಲೆಕ್ಸ್ ಕ್ಯಾರಿ 18 ರನ್ ಸಿಡಿಸಿ ನಿರ್ಗಮಿಸಿದರು. ಅಬ್ಬರಿಸೋ ಸೂಚನೆ ನೀಡಿದ ಉಸ್ಮಾನ್ ಖವಾಜ 21 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು.

ಇದನ್ನೂ ಓದಿ: ಐಪಿಎಲ್‌ಗಾಗಿ 16 ವರ್ಷಗಳ ಬಳಿಕ ಆಯೋಜನೆಗೊಂಡ ಸರಣಿ ರದ್ದು?

ಶಾನ್ ಮಾರ್ಶ್ ಹಾಗೂ ಪೀಟರ್‌ ಹ್ಯಾಂಡ್ಸ್‌ಕಾಂಬ್ ಜೊತೆಯಾಟದಿಂದ ಆಸಿಸ್ ಚೇತರಿಕೆ ಕಂಡಿತು. ಆದರೆ ಹ್ಯಾಂಡ್ಸ್‌ಕಾಂಬ್ 20 ರನ್ ಸಿಡಿಸಿ ಔಟಾದರು. ತಂಡಕ್ಕೆ ಆಸರೆಯಾಗಿರುವ ಶಾನ್ ಮಾರ್ಶ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಸದ್ಯ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 141 ರನ್ ಸಿಡಿಸಿದೆ.