2036ರ ಒಲಿಂಪಿಕ್ಸ್‌ಗೆ ಬಿಡ್ ಸಲ್ಲಿಸಲು ಸಿದ್ದ: ಅನುರಾಗ್ ಠಾಕೂರ್
ಈ ಬಾರಿ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ ನಡೆಯಲಿದ್ದು, 2028ರಲ್ಲಿ ಲಾಸ್ ಏಂಜಲೀಸ್, 2032ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಟೇನ್ ಆತಿಥ್ಯ ವಹಿಸಲಿದೆ. 2036ರ ಒಲಿಂಪಿಕ್ಸ್‌ಗೆ 2026 ಅಥವಾ 2027ರಲ್ಲಿ ಆತಿಥ್ಯ ರಾಷ್ಟ್ರ ಆಯ್ಕೆಯಾಗಲಿದೆ.
ಹಮೀರ್‌ಪುರ(ಹಿಮಾಚಲ ಪ್ರದೇಶ): 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ಭಾರತ ಸಿದ್ದವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಒಲಿಂಪಿಕ್ ಬಿಡ್ ಸಲ್ಲಿಸಲು ನಾವು ಸಿದ್ಧರಾಗಿದ್ದೇವೆ. ಆತಿಥ್ಯ ಹಕ್ಕು ನಮಗೆ ಸಿಗುವ ವಿಶ್ವಾಸವಿದೆ' ಎಂದಿದ್ದಾರೆ. ಕ್ರೀಡಾ ಮೂಲಸೌಕರ್ಯಕ್ಕೆ 5,000 ಕೋಟಿ ಬೇಕಾಗಬಹುದು. ಅದು 20,000 ಕೋಟಿಗೆ ಹೆಚ್ಚಳವಾದರೂ ನಿಭಾಯಿಸಬಹುದು' ಎಂದು ಹೇಳಿದ್ದಾರೆ.
ಈ ಬಾರಿ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ ನಡೆಯಲಿದ್ದು, 2028ರಲ್ಲಿ ಲಾಸ್ ಏಂಜಲೀಸ್, 2032ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಟೇನ್ ಆತಿಥ್ಯ ವಹಿಸಲಿದೆ. 2036ರ ಒಲಿಂಪಿಕ್ಸ್‌ಗೆ 2026 ಅಥವಾ 2027ರಲ್ಲಿ ಆತಿಥ್ಯ ರಾಷ್ಟ್ರ ಆಯ್ಕೆಯಾಗಲಿದೆ.
ಒಲಿಂಪಿಕ್ ಕೋಟಾ ಗೆದ ಕುಸ್ತಿಪಟು ನಿಶಾ ದಹಿಯಾ
ಇಸ್ತಾಂಬುಲ್ (ಟರ್ಕಿ): ಭಾರತದ ಕುಸ್ತಿಪಟು ನಿಶಾ ದಹಿಯಾ ಪ್ಯಾರಿಸ್ ಒಲಿಂಪಿಕ್ಸ್ ಕೋಟಾ ಗೆದ್ದಿದ್ದಾರೆ. ಇದರೊಂದಿಗೆ ಕುಸ್ತಿಯಲ್ಲಿ ಭಾರತಕ್ಕೆ ಲಭಿಸಿದ ಕೋಟಾ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಎಲ್ಲವೂ ಮಹಿಳಾ ವಿಭಾಗದಲ್ಲಿ ಲಭಿಸಿವೆ ಎನ್ನುವುದು ಗಮನಾರ್ಹ.
ಮಡದಿ ಮಗನ ಜೊತೆ ಇರ್ಫಾನ್ ಪಠಾಣ್ ಮಸ್ತಿ, ಹೆಂಡ್ತಿ ಬುರ್ಖಾ ಹಾಕದ್ದಕ್ಕೆ ನೆಟ್ಟಿಗರ ತರಾಟೆ..!
ಶುಕ್ರವಾರ ರಾತ್ರಿ ಒಲಿಂಪಿಕ್ಸ್ ವಿಶ್ವ ಕುಸ್ತಿ ಅರ್ಹತಾ ಟೂರ್ನಿಯಲ್ಲಿ ನಿಶಾ 68 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ರೊಮಾನಿಯಾ ಅಲೆಕ್ಸಾಂಡ್ರಾ ವಿರುದ್ಧ ಗೆಲುವು ಸಾಧಿಸಿದರು. ಇನ್ನು, ಪುರುಷರ ಫ್ರೀಸ್ಟೈಲ್‌ನಲ್ಲಿ ಅಮನ್ ಶೆರಾವತ್, ಸುಜೀತ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಫೈನಲ್ ಪ್ರವೇಶಿಸಿದರೆ ಒಲಿಂಪಿಕ್ಸ್ ಕೋಟಾ ಗೆಲ್ಲಲಿದ್ದಾರೆ.
ಜೋಕೋವಿಚ್‌ರ ತಲೆ ಮೇಲೆ ಬಾಟಲಿ ಬೀಳಿಸಿದ ಅಭಿಮಾನಿ!
ರೋಮ್: ಟೆನಿಸ್ ದಿಗ್ಗಜ ನೋವಾಕ್ ಜೋಕೋವಿಚ್‌ರ ತಲೆ ಮೇಲೆ ಅಭಿಮಾನಿಯೊಬ್ಬ ನೀರಿನ ಬಾಟಲಿ ಬೀಳಿಸಿದ ಘಟನೆ ಇಟಲಿ ಓಪನ್ ಟೆನಿಸ್ ಟೂರ್ನಿಯ ವೇಳೆ ನಡೆದಿದೆ. ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಕೊರೆನ್ಟಿನ್ ವಿರುದ್ಧ ಗೆದ್ದ ಬಳಿಕ ಅಭಿಮಾನಿಗಳ ಮನವಿ ಮೇರೆಗೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ, ಆಕಸ್ಮಿಕವಾಗಿ ವ್ಯಕ್ತಿಯೊಬ್ಬ ಜೋಕೋವಿಚ್‌ರ ತಲೆ ಮೇಲೆ ಅಲ್ಯೂಮಿನಿಯಂ ಬಾಟಲಿಯನ್ನು ಬೀಳಿಸಿದ್ದಾನೆ.
ಮುಂಬೈ ಬಗ್ಗುಬಡಿದು ಕೆಕೆಆರ್ ಪ್ಲೇ ಆಫ್‌ಗೆ ಅಧಿಕೃತ ಎಂಟ್ರಿ
ಜೋಕೋವಿಚ್‌ರ ತಲೆಯಿಂದ ರಕ್ತ ಸುರಿದರೂ, ಗಾಯಕ್ಕೆ ಯಾವುದೇ ಹೊಳಿಗೆ ಹಾಕುವ ಅವಶ್ಯಕತೆ ಎದುರಾಗಲಿಲ್ಲ. ತಾವು ಆರೋಗ್ಯವಾಗಿದ್ದು, ಗಾಯ ಗಂಭೀರ ಪ್ರಮಾಣದ್ದಲ್ಲ ಎಂದು ಜೋಕೋ ಶನಿವಾರ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ. ಶನಿವಾರ ಅವರು ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೆಲ್ಮೆಟ್ ಧರಿಸಿ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.