ಬೆಂಗಳೂರಿನಲ್ಲಿ ಟೀಂ ಇಂಡಿಯಾ ಎ ತಂಡಕ್ಕೆ ರೋಚಕ ಗೆಲುವು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 7:13 PM IST
India A secure thrilling innings win against South Africa A on Day 4
Highlights

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಸೌತ್ಆಫ್ರಿಕಾ ಎ ನಡುವಿನ ಹೋರಾಟ ರೋಚಕ ಅಂತ್ಯ ಕಂಡಿದೆ. ಹರಿಣಗಳನ್ನ ಮಣಿಸೋ ಮೂಲಕ ಭಾರತ ಎ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಆ.07) ಸೌತ್ಆಫ್ರಿಕಾ ಎ ವಿರುದ್ಧದ ಅನಧೀಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ 4ನೇ ಹಾಗೂ ಅಂತಿಮ ದಿನದಾಟದ ಅಂತ್ಯದಲ್ಲಿ ಇನ್ನಿಂಗ್ಸ್ ಹಾಗೂ 30 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಸೌತ್ಆಫ್ರಿಕಾ ಎ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ  ಭಾರತ ಎ ತಂಡ 8 ವಿಕೆಟ್ ನಷ್ಟಕ್ಕೆ 584 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಭಾರಿ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಸೌತ್ಆಫ್ರಿಕಾ, ಮತ್ತೆ ಮೊಹಮ್ಮದ್ ಸಿರಾಜ್ ದಾಳಿಗೆ ನಲುಗಿತು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ ಸಿರಾಜ್ 2ನೇ ಇನ್ನಿಂಗ್ಸ್‌ನಲ್ಲೂ 5 ವಿಕೆಟ್ ಉರುಳಿಸಿದರು. ಈ ಮೂಲಕ ಸೌತ್ಆಫ್ರಿಕಾ ಎ ತಂಡ ಅಂತಿಮ ಸೆಶನ್‌ನ ಅಂತ್ಯದಲ್ಲಿ 308 ರನ್‌ಗೆ ಆಲೌಟ್ ಆಯಿತು.

ಸೌತ್ಆಫ್ರಿಕಾ ತಂಡವನ್ನ ಆಲೌಟ್ ಮಾಡಿದ ಭಾರತ ಇನ್ನಿಂಗ್ಸ್‌ ಹಾಗೂ 30 ರನ್ ಗೆಲವು ಸಾಧಿಸಿತು. ಈ ಮೂಲಕ 2 ಟೆಸ್ಟ್ ಪಂದ್ಯದ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

loader