Asianet Suvarna News Asianet Suvarna News

396ರನ್‌ಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಡಿಕ್ಲೇರ್-ಭಾರತದ ಮೊದಲ ವಿಕೆಟ್ ಪತನ

ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಆಂಗ್ಲರು, ಇದೀಗ ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ಹೀಗಾಗಿ ದಿಢೀರ್ ಡಿಕ್ಲೇರ್ ಘೋಷಿಸಿರುವ ಇಂಗ್ಲೆಂಡ್, ಟೀಂ ಇಂಡಿಯಾವನ್ನ ಆಲೌಟ್ ಮಾಡಲು ಹೋರಾಟ ಆರಂಭಿಸಿದ್ದಾರೆ.

Ind Vs Eng Test England declare first innigns with 289 run leads
Author
Bengaluru, First Published Aug 12, 2018, 4:25 PM IST

ಲಾರ್ಡ್ಸ್(ಆ.12): ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದ  ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 396 ರನ್‌ಗೆ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ  ಇಂಗ್ಲೆಂಡ್ 289 ರನ್ ಮುನ್ನಡೆ ಸಾಧಿಸಿದೆ. 

 

 

6 ವಿಕೆಟ್ ನಷ್ಟಕ್ಕೆ 357 ರನ್‌ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್  ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಕ್ರಿಸ್ ವೋಕ್ಸ್ ಅಜೇಯ 137 ರನ್ ಸಿಡಿಸಿದರೆ, ಸ್ಯಾಮ್ ಕುರ್ರನ್ 40 ರನ್ ಸಿಡಿಸಿ ಔಟಾದರು. ಇದರೊಂದಿಗೆ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತು.

289 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದೆ. ಮುರಳಿ ವಿಜಯ್ ರನ್ ಖಾತೆ ಆರಂಭಿಸೋ ಮೊದಲೇ ಪೆವಿಲಿಯನ್ ಸೇರಿಕೊಂಡಿದ್ದಾರೆ. . ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ವಿಕೆಟ್ ಉಳಿಸಿಕೊಂಡು ಹೋರಾಟ ನಡೆಸಬೇಕಿದೆ. ಆದರೆ ಇದು ಸಾಧ್ಯವೇ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.
 

Follow Us:
Download App:
  • android
  • ios