Asianet Suvarna News Asianet Suvarna News

ಚಿನ್ನ ಗೆದ್ದು ಇತಿಹಾಸ ಬರೆದ ಹಿಮಾ ದಾಸ್ ಜಾತಿ ಯಾವುದು..?

ಹಿಮ ದಾಸ್ ಬಗ್ಗೆ ಇಂಟರ್’ನೆಟ್’ನಲ್ಲಿ ಏನನ್ನು ಹುಡುಕಿರಬಹುದು ಎಂದು ಯೋಚಿಸಿದ್ದೀರಾ..? ಆಕೆಯ ಹಿನ್ನಲೆ ಅಥವಾ ಸಾಧನೆ ಇರಬಹುದೇ ಎಂದು ಅಂದುಕೊಂಡರೆ ನಿಮ್ಮ ಊಹೆ ಖಂಡಿತಾ ತಪ್ಪು. ಅದರ ಬದಲಾಗಿ ಹಿಮಾ ದಾಸ್ ಬಗ್ಗೆ ಹುಡುಕಿದ್ದು, ಆಕೆಯ ಜಾತಿಯನ್ನು..!

How People Searching For Hima Das Caste On Google

ಬೆಂಗಳೂರು[ಜು.15]: ಹಿಮಾ ದಾಸ್ ಭಾರತದ ಕ್ರೀಡಾ ಇತಿಹಾಸದಲ್ಲೀಗ ಹೊಸ ಮಿನುಗು ತಾರೆ. ಫಿನ್’ಲ್ಯಾಂಡ್’ನಲ್ಲಿ ನಡೆದ ಕಿರಿಯರ ವಿಶ್ವಚಾಂಪಿಯನ್’ಶಿಪ್’ನಲ್ಲಿ 400 ಮೀಟರ್ ರನ್ನಿಂಗ್’ನಲ್ಲಿ ಚಿನ್ನ ಗೆಲ್ಲುವ ಮೂಲಕ ಟ್ರ್ಯಾಕ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಇತಿಹಾಸ ನಿರ್ಮಿಸಿರುವುದು ಗೊತ್ತೇ ಇದೆ. ಸಾಮಾಜಿಕ ಜಾಲತಾಣಗಳಲ್ಲೂ ಹಿಮಾ ದಾಸ್’ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಹಿಮ ದಾಸ್ ಬಗ್ಗೆ ಇಂಟರ್’ನೆಟ್’ನಲ್ಲಿ ಏನನ್ನು ಹುಡುಕಿರಬಹುದು ಎಂದು ಯೋಚಿಸಿದ್ದೀರಾ..? ಆಕೆಯ ಹಿನ್ನಲೆ ಅಥವಾ ಸಾಧನೆ ಇರಬಹುದೇ ಎಂದು ಅಂದುಕೊಂಡರೆ ನಿಮ್ಮ ಊಹೆ ಖಂಡಿತಾ ತಪ್ಪು. ಅದರ ಬದಲಾಗಿ ಹಿಮಾ ದಾಸ್ ಬಗ್ಗೆ ಹುಡುಕಿದ್ದು, ಆಕೆಯ ಜಾತಿಯನ್ನು..!

How People Searching For Hima Das Caste On Google

ಚಿನ್ನ ಗೆದ್ದ ಬಳಿಕ ಹಿಮಾ ದಾಸ್ ಬಗ್ಗೆ ಗೂಗಲ್’ನಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿರುವುದು ಏನು ಎಂದು  ಹುಡುಕಲು ಹೊರಟರೆ ನಮ್ಮ ಮುಂದೆ ಗೂಗಲ್ ಮೊದಲು ತೋರಿಸುವುದು ಹಿಮಾ ದಾಸ್ ಕ್ಯಾಸ್ಟ್. ಅದರಲ್ಲೂ ಕೇರಳ, ಕರ್ನಾಟಕ, ಹರ್ಯಾಣ, ಅಸ್ಸಾಂ ಹಾಗೂ ಬೆಂಗಾಲ್’ನಲ್ಲಿ ಅತಿ ಹೆಚ್ಚು ಜನ ಹಿಮಾಳ ಜಾತಿಯ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. 

ಇದೇ ರೀತಿಯ ಘಟನೆ ಕಳೆದ ಒಲಿಂಪಿಕ್ಸ್’ನಲ್ಲೂ ಸಂಭವಿಸಿತ್ತು. ರಿಯೊ ಕೂಟದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಸಾಕ್ಷಿ ಮಲ್ಲಿಕ್ ಹಾಗೂ ಪಿ.ವಿ.ಸಿಂಧು ಅವರ ಜಾತಿಯನ್ನು ಹುಡುಕಿದ್ದರು ಭಾರತದ ಮಂದಿ.
ಅಂತರಾಷ್ಟ್ರೀಯ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದುಕೊಟ್ಟರೂ ಅವರ ಜಾತಿಯ ಹಿನ್ನಲೆ ಹುಡುಕುವ ಮಂದಿಗೆ ಏನೆನ್ನಬೇಕೊ ಗೊತ್ತಿಲ್ಲ. ಒಂದಂತು ಸತ್ಯ ಆಕೆಯ ಜಾತಿ ಆಕೆಯ ಪ್ರದರ್ಶನದ ಮೇಲೆ ಖಂಡಿತ ಪ್ರಭಾವ ಬೀರಲಾರದು. ಜಾಗತಿಕ ಮಟ್ಟದಲ್ಲಿ ಹಿಮಾ ದಾಸ್ ಭಾರತವನ್ನು ಪ್ರತಿನಿಧಿಸಿದ್ದಾಳೆಯೇ ಹೊರತು ಜಾತಿಯನ್ನಲ್ಲ. ನೀವೇನಂತೀರಾ...
   

Follow Us:
Download App:
  • android
  • ios