ಮುಂಬೈ(ಅ.18): ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಹಾಗೂ ಸಂಗೀತ ಮಾಂತ್ರಿಕ ಎ.ಆರ್.ರಹಮಾನ್ ಮತ್ತೆ ಒಂದಾಗುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮತ್ತೊಂದು ಹಾಡು ಮೂಡಿ ಬರುತ್ತಿದೆ. 2018ರ ಹಾಕಿ ವಿಶ್ವಕಪ್ ಟೂರ್ನಿಗಾಗಿ ಶಾರುಖ್ ಖಾನ್ ಹಾಗೂ ರಹಮಾನ್ ಜೊತೆಯಾಗಿ ಹಾಡು ಕಂಪೋಸ್ ಮಾಡುತ್ತಿದ್ದಾರೆ.

ಭುಬನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನವೆಂಬರ್ 28 ರಿಂದ ವಿಶ್ವಕಪ್ ಹಾಕಿ ಟೂರ್ನಿ ಆರಂಭಗೊಳ್ಳಲಿದೆ. ವಿಶ್ವಕಪ್‌ಗಾಗಿ ಜೈ ಹಿಂದ್, ಜೈ ಇಂಡಿಯಾ ಅನ್ನೋ ಹಾಡನ್ನ ಎ.ಆರ್.ರಹಮಾನ್ ಕಂಪೋಸ್ ಮಾಡಿದ್ದಾರೆ. ಇದಕ್ಕೆ ಖ್ಯಾತ ಸಾಹಿತಿ ಗುಲ್ಜಾರ್ ಅವರ ಸಾಹಿತ್ಯವಿದೆ.

 

 

ಚಕ್‌ದೇ ಇಂಡಿಯಾ ಬಾಲಿವುಡ್ ಚಿತ್ರದ ಮೂಲಕ ಹಾಕಿ ಕೋಚ್ ಆಗಿ ಎಲ್ಲರ ಗಮನಸೆಳೆದ ಶಾರುಖ್ ಖಾನ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಾಡಿನ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದೆ. ಈ ಕುರಿತು ಶಾರುಖ್ ಖಾನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಅಕ್ಟೋಬರ್‌ನಲ್ಲಿ ಈ ಹಾಡು ರಿಲೀಸ್ ಆಗಲಿದೆ. ಇಷ್ಟೇ ಹಾಕಿ ವಿಶ್ವಕಪ್ ಉದ್ಘಟನಾ ಸಮಾರಂಭದಲ್ಲಿ ಈ ಹಾಡನ್ನ ಸ್ವತಃ ಎ.ಆರ್.ರಹಮಾನ್ ಹಾಡಲಿದ್ದಾರೆ. ಹಾಕಿ ವಿಶ್ವಕಪ್ ಹಾಡು ಇದೀಗ ಭಾರಿ ಕುತೂಹಲ ಕೆರಳಿಸಿದೆ.