ಭುವನೇಶ್ವರ್[ನ.28]: 14ನೇ ಆವೃತ್ತಿಯ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ದುರ್ಬಲ ದಕ್ಷಿಣ ಆಫ್ರಿಕಾ ತಂಡವನ್ನು ಮನ್’ಪ್ರೀತ್ ಸಿಂಗ್ ನೇತೃತ್ವದ ಹಾಕಿ ಟೀಂ ಇಂಡಿಯಾ 5-0 ಗೋಲುಗಳಿಂದ ಮಣಿಸುವ ಮೂಲಕ ಶುಭಾರಂಭ ಮಾಡಿದೆ.

ಕಳಿಂಗಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪಂದ್ಯದ 10ನೇ ನಿಮಿಷದಲ್ಲೇ ಮನ್ದೀಪ್ ಸಿಂಗ್ ಭಾರತಕ್ಕೆ ಮೊದಲ ಗೋಲು ತಂದಿತ್ತರು. ಇದರ ಬೆನ್ನಲ್ಲೇ ಆಕಾಶ್’ದೀಪ್[12ನೇ ನಿ] ಭಾರತಕ್ಕೆ ಮತ್ತೊಂದು ಗೋಲು ಸಿಡಿಸಿದರು. ಮೊದಲ ಕ್ವಾರ್ಟರ್’ನಲ್ಲಿ ಭಾರತ 2-0 ಗೋಲುಗಳ ಮುನ್ನಡೆ ಕಾಯ್ದುಕೊಂಡಿತು. 
ಇನ್ನು ಪಂದ್ಯದ 43ನೇ ನಿಮಿಷದಲ್ಲಿ ಸಿಮ್ರನ್’ಜಿತ್ ಸಿಂಗ್ ಗೋಲು ಬಾರಿಸುವ ಮೂಲಕ ಭಾರತಕ್ಕೆ 3-0 ಮುನ್ನಡೆ ತಂದಿತ್ತರು. ಇದರ ಬೆನ್ನಲ್ಲೇ ಲಲಿತ್ ಉಪಧ್ಯಾಯ್[45ನೇ ನಿ.] ಗೋಲು ಬಾರಿಸಿದರು. ಇದಾದ ಮತ್ತೊಂದು ನಿಮಿಷದಲ್ಲಿ ಸಿಮ್ರನ್’ಜಿತ್ ಗೋಲು ಬಾರಿಸಿ ಅಂತರವನ್ನು 5-0ಗೆ ಹೆಚ್ಚಿಸಿದರು.

2 ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸಿಮ್ರನ್’ಜಿತ್ ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೇ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ಚಿಂಗಲೆನ್ಸನ್ ಸಿಂಗ್ ಕಂಗಜಮ್ 200ನೇ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಸಾಧನೆ ಮಾಡಿದರು.

ಕೆನಡಾವನ್ನು ಮಣಿಸಿದ ಬೆಲ್ಜಿಯಂ:
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಬೆಲ್ಜಿಯಂ ತಂಡವು 2-1 ಅಂತರದಲ್ಲಿ ಕೆನಡಾವನ್ನು ಮಣಿಸಿ ಶುಭಾರಂಭ ಮಾಡಿದೆ. 

’ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ 3ನೇ ಶ್ರೇಯಾಂಕಿತ ಬೆಲ್ಜಿಯಂ-ಕೆನಡಾ ನಡುವೆ ಹೋರಾಟ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಮೊದಲಾರ್ಧದಲ್ಲಿ ಪ್ರಾಬಲ್ಯ ಮೆರೆದ ಬೆಲ್ಜಿಯಂ 2-0 ಮುನ್ನಡೆ ಕಾಯ್ದುಕೊಂಡಿತ್ತು. ಪಂದ್ಯದ 48ನೇ ನಿಮಿಷದಲ್ಲಿ