ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಪ್ರಶಸ್ತಿಗಾಗಿ ಇಂಡೋ-ಪಾಕ್ ಕಾದಾಟ
ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತ, ಜಪಾನ್ ತಂಡವನ್ನು 3-2 ಗೋಲುಗಳಿಂದ ಮಣಿಸಿ ಫೈನಲ್‌ಗೇರಿತು. ವಿಶ್ವ ನಂ.5 ಭಾರತ ತಂಡದ ಪರ ಗುರ್ಜಂತ್ ಸಿಂಗ್(19ನೇ ನಿ.), ಚಿಂಗ್ಲೆನ್ಸಾನಾ(44ನೇ ನಿ.) ಮತ್ತು ದಿಲ್‌ಪ್ರೀತ್ ಸಿಂಗ್(55ನೇ ನಿ.) ಗೋಲು ಗಳಿಸಿದರೆ, ಜಪಾನ್ ಪರ ವಕುರಿ ಹಿರೋಟಾಕಾ(22ನೇ ನಿ.) ಮತ್ತು ಜೆಂಡಾನಾ ಹಿರೋಟಾಕಾ(56ನೇ ನಿ.) ಗೋಲು ಬಾರಿಸಿದರು.
ಮಸ್ಕಟ್(ಅ.29): ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ.
ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತ, ಜಪಾನ್ ತಂಡವನ್ನು 3-2 ಗೋಲುಗಳಿಂದ ಮಣಿಸಿ ಫೈನಲ್‌ಗೇರಿತು. ವಿಶ್ವ ನಂ.5 ಭಾರತ ತಂಡದ ಪರ ಗುರ್ಜಂತ್ ಸಿಂಗ್(19ನೇ ನಿ.), ಚಿಂಗ್ಲೆನ್ಸಾನಾ(44ನೇ ನಿ.) ಮತ್ತು ದಿಲ್‌ಪ್ರೀತ್ ಸಿಂಗ್(55ನೇ ನಿ.) ಗೋಲು ಗಳಿಸಿದರೆ, ಜಪಾನ್ ಪರ ವಕುರಿ ಹಿರೋಟಾಕಾ(22ನೇ ನಿ.) ಮತ್ತು ಜೆಂಡಾನಾ ಹಿರೋಟಾಕಾ(56ನೇ ನಿ.) ಗೋಲು ಬಾರಿಸಿದರು.
ಪಂದ್ಯದಲ್ಲಿ ಮೊದಲ ಕ್ವಾರ್ಟರ್ ಗೋಲು ರಹಿತ ಮುಕ್ತಾಯ ಕಂಡಿತು. 2ನೇ ಕ್ವಾರ್ಟರ್‌ನ 4ನೇ ನಿಮಿಷದಲ್ಲಿ ಗೋಲು ಗಳಿಸಿದ ಗುರ್ಜಂತ್ ಸಿಂಗ್ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ 22ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ವಕುರಿ ಹಿರೋಟಾಕಾ ಗಳಿಸಿದ ಗೋಲಿನಿಂದ ಜಪಾನ್ ಸಮಬಲ ಸಾಧಿಸಿತು.
ಮೊದಲಾರ್ಧದ ಮುಕ್ತಾಯಕ್ಕೆ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿದ್ದವು. 44ನೇ ನಿಮಿಷದಲ್ಲಿ ಚೆಂಗ್ಲೆನ್ಸಾನಾ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. 55ನೇ ನಿಮಿಷದಲ್ಲಿ ದಿಲ್‌ಪ್ರೀತ್‌ರ ಫೀಲ್ಡ್ ಗೋಲ್ ನೆರವಿನಿಂದ ಭಾರತ 3-1 ಗೋಲುಗಳ ಮುನ್ನಡೆ ಸಾಧಿಸಿತು. ನಂತರದಲ್ಲಿ ಪಂದ್ಯ ಮುಗಿಯಲು ಇನ್ನು ಕೆಲ ನಿಮಿಷಗಳು ಬಾಕಿ ಇರುವಾಗ ಭಾರತದ ಕೋಟೆ ಭೇದಿಸಿದ ಜಪಾನ್‌ನ ಜೆಂಡಾನಾ ಹಿರೋಟಾಕಾ ಅಂತರವನ್ನು 2-3ಕ್ಕೆ ಇಳಿಸಿದರು. ಆದರೆ ನಂತರದಲ್ಲಿ ಜಪಾನ್‌ಗೆ ಗೋಲು ಗಳಿಸಲು ಸಾಧ್ಯವಾಗದೇ ಸೋಲುಂಡಿತು. ರೌಂಡ್ ರಾಬಿನ್ ಹಂತದ ಪಂದ್ಯದಲ್ಲಿ ಜಪಾನ್ ವಿರುದ್ಧ 9-0 ಗೋಲುಗಳ ಗೆಲುವು ಸಾಧಿಸಿದ್ದ ಭಾರತಕ್ಕೆ, ಸೆಮೀಸ್'ನಲ್ಲಿ ಕಠಿಣ ಸ್ಪರ್ಧೆ ಎದುರಾಯಿತು.