ಅಜ್ಲಾನ್‌ ಶಾ ಹಾಕಿ: ಶಿಬಿರ ಸೇರಿಕೊಂಡ ರಾಜ್ಯದ ಸುನಿಲ್!

ಅಜ್ಲಾನ್‌ ಶಾ ಹಾಕಿ ಕಪ್‌ಗೆ ಸಿದ್ಧತೆ ಆರಂಭಗೊಂಡಿದೆ. 34  ಹಾಕಿ ಪಟುಗಳನ್ನ ಶಿಬಿರಕ್ಕೆ ಆಯ್ಕೆ ಮಾಡಲಾಗಿದ್ದು, ರಾಜ್ಯದ ಎಸ್.ವಿ.ಸುನಿಲ್ ಶಿಬಿರ ಸೇರಿಕೊಂಡಿದ್ದಾರೆ. ತಂಡದ ಸಿದ್ಧತೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Hockey India 34 players named for national camp before  azlan shah cup

ನವದೆಹಲಿ: ಈ ಋುತುವಿನ ಮೊದಲ ಟೂರ್ನಿ ಅಜ್ಲಾನ್‌ ಶಾ ಹಾಕಿ ಕಪ್‌ಗೆ ಸಿದ್ಧತೆ ನಡೆಸಲು ಹಾಕಿ ಇಂಡಿಯಾ ಅಭ್ಯಾಸ ಶಿಬಿರ ಆಯೋಜಿಸಿದ್ದು, 34 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಫೆ.18ರಿಂದ ಬೆಂಗಳೂರಿನ ಸಾಯ್‌ನಲ್ಲಿ ಶಿಬಿರ ನಡೆಯಲಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಹಾಕಿ ವಿಶ್ವಕಪ್‌ ತಂಡದಲ್ಲಿದ್ದ ಎಲ್ಲಾ 18 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. 

ಇದನ್ನೂ ಓದಿ: ಭಾರತ ಹಾಕಿ ಆಯ್ಕೆ ಸಮಿತಿಗೆ ಸರ್ದಾರ್‌ ಸಿಂಗ್‌

ಗಾಯದ ಸಮಸ್ಯೆಯಿಂದಾಗಿ ವಿಶ್ವಕಪ್‌ಗೆ ಗೈರಾಗಿದ್ದ ಕರ್ನಾಟಕದ ಎಸ್‌.ವಿ.ಸುನಿಲ್‌ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ ಕೊನೆ ವಾರದಲ್ಲಿ ಪಂದ್ಯಾವಳಿಗೆ ಭಾರತ ತಂಡದ ಆಯ್ಕೆ ನಡೆಯಲಿದೆ ಎಂದು ಹಾಕಿ ಇಂಡಿಯಾದ ಉನ್ನತ ಪ್ರದರ್ಶನ ನಿರ್ದೇಶತಕ ಡೇವಿಡ್‌ ಜಾನ್‌ ಹೇಳಿದ್ದಾರೆ. ಮಾ.23ರಿಂದ 30ರ ವರೆಗೂ ಅಜ್ಲಾನ್‌ ಶಾ ಟೂರ್ನಿ ನಡೆಯಲಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತಾರಾಷ್ಟ್ರೀಯ ಹಾಕಿ ಪಟು ನಿತಿನ್ ತಿಮ್ಮಯ್ಯ!
 

Latest Videos
Follow Us:
Download App:
  • android
  • ios