Asianet Suvarna News Asianet Suvarna News

ಮಗನ ಸರ್ಪ್ರೈಸ್‌ಗೆ ಭಾವುಕರಾದ ಹಾರ್ದಿಕ್ ಪಾಂಡ್ಯ ತಂದೆ!

ಸುದೀರ್ಘ ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ಮರಳಿದ ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ, ತಂದೆಗೆ ಸರ್ಪ್ರೈಸ್ ನೀಡಿದರು. ಈ ಭಾವುಕ ಕ್ಷಣದ ವೀಡಿಯೋ ಇಲ್ಲಿದೆ.

Hardik Pandya surprises his father in a heartwarming gesture
Author
Bengaluru, First Published Sep 16, 2018, 3:56 PM IST

ಸೂರತ್(ಸೆ.16): ಇಂಗ್ಲೆಂಡ್ ವಿರುದ್ಧದ 3 ತಿಂಗಳ ಸುದೀರ್ಘ ಸರಣಿ ಮುಗಿಸಿ ತವರಿಗೆ ಮರಳಿದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಗೆ ಸರ್ಪ್ರೈಸ್ ನೀಡಿದರು. ಪಾಂಡ್ಯ ಸರ್ಪ್ರೈಸ್‌ಗೆ ಹಾರ್ದಿಕ್ ತಂದೆ ಕಣ್ಣಲ್ಲಿ ನೀರು ಜಿನುಗಿತ್ತು.

ಟಿ20, ಏಕದಿನ ಹಾಗೂ ಟೆಸ್ಟ್ ಸರಣಿ ಮುಗಿಸಿ ಇಂಗ್ಲೆಂಡ್‌ನಿಂದ ತವರಿಗೆ ಮರಳಿದ ಹಾರ್ದಿಕ್ ಪಾಂಡ್ಯ ಮನೆಗೆ ತೆರಳಿದ ವೇಳೆ, ತಂದೆ ಮಲಗಿದ್ದರು. ಹೀಗಾಗಿ ನೇರವಾಗಿ ಬೆಡ್‌ ರೂಂಗೆ ತೆರಳಿದ ಹಾರ್ದಿಕ್ , ತಂದೆಯನ್ನ ಎಬ್ಬಿಸಿದರು. 3 ತಿಂಗಳ ಬಳಿಕ ಮಗನನ್ನ ನೋಡಿದ ಹಾರ್ದಿಕ್ ತಂದೆ ಭಾವುಕರಾದರು.

 

 
 
 
 
 
 
 
 
 
 
 
 
 

When you surprise daddy ❤️ #seeinghimafter3months

A post shared by Hardik Pandya (@hardikpandya93) on Sep 14, 2018 at 7:13am PDT

 

ಕೆಲ ಹೊತ್ತು ಮಗನನ್ನ ಅಪ್ಪಿಕೊಂಡ ಹಾರ್ದಿಕ್ ತಂದೆ ಸಂತಸದಲ್ಲಿ ತೇಲಾಡಿದರು. ಇಷ್ಟೇ ಅಲ್ಲ ಭಾವುಕರಾದ ಹಾರ್ದಿಕ್ ತಂದೆ ಮಗನ ಯೋಗಕ್ಷೇಮ ವಿಚಾರಿಸಿದರು. ಹಾರ್ದಿಕ್ ಇಂಗ್ಲೆಂಡ್‌ನಿಂದ ನೇರವಾಗಿ ಏಷ್ಯಾಕಪ್ ಟೂರ್ನಿಗಾಗಿ ದುಬೈಗೆ ತೆರಳುವುದಾಗಿ ತಂದೆಗೆ ಹೇಳಿದ್ದರು.

ಏಷ್ಯಾಕಪ್ ಟೂರ್ನಿಗೆ ತೆರಳೋ ಮುನ್ನ ಸಿಕ್ಕ ಅತ್ಯಲ್ಪ ದಿನದಲ್ಲಿ ಪಾಂಡ್ಯ ಮನೆಗೆ ಭೇಟಿ ನೀಡಿ ತಂದೆಗೆ ಅಚ್ಚರಿ ನೀಡಿದರು. ಪಾಂಡ್ಯ ಸರ್ಪ್ರೈಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾರ್ದಿಕ್ ಪಾಂಡ್ಯ ಇದೇ ರೀತಿ ಹಲವು ಬಾರಿ ಪೋಷಕರಿಗೆ ಅಚ್ಚರಿ ನೀಡಿದ್ದಾರೆ. ಸರಣಿ ಮುಗಿಸಿ ತವರಿಗೆ ವಾಪಾಸ್ಸಾಗೋ ವೇಳೆ ಸರ್ಪ್ರೈಸ್ ನೀಡಿದ್ದಾರೆ.  ಈ ಹಿಂದೆ ತಂದೆಗೆ ಹೊಸ ಕಾರು ಗಿಫ್ಟ್ ನೀಡಿ ಅಚ್ಚರಿ ನೀಡಿದ್ದರು.

Follow Us:
Download App:
  • android
  • ios