ಬರೋಡಾ(ಡಿ.10): ಏಷ್ಯಾಕಪ್ ಟೂರ್ನಿಯಲ್ಲಿ ಇಂಜುರಿ ತುತ್ತಾಗಿ ಮೂರು ತಿಂಗಳ ಕಾಲಲ ವಿಶ್ರಾಂತಿಯಲ್ಲಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಡಿಸೆಂಬರ್ 1 4 ರಂದು ಆರಂಭವಾಗಲಿರುವ ಮುಂಬೈ ವಿರುದ್ಧ ರಣಜಿ ಪಂದ್ಯದಲ್ಲಿ ಹಾರ್ದಿಕ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಛೀ..ರವಿಶಾಸ್ತ್ರಿಗಳ ಬಾಯಲ್ಲಿ ಎಂಥಾ ಅಶ್ಲೀಲ ಮಾತು...ವಿಡಿಯೋ ವೈರಲ್

ಬರೋಡಾ ರಣಜಿ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಲಾಗಿದೆ. ಈ ಮೂಲಕ ಇಂಜುರಿ ಬಳಿಕ ಮೊದಲ ಪಂದ್ಯಕ್ಕೆ ಪಾಂಡ್ಯ ರೆಡಿಯಾಗಿದ್ದಾರೆ. ಬರೋಡಾ ಕ್ರಿಕೆಟ್ ಸಂಸ್ಥೆ 15 ಸದಸ್ಯರ ರಣಜಿ ತಂಡ ಪ್ರಕಟಿಸಿದ್ದು, ಹಾರ್ದಿಕ್ ಪಾಂಡ್ಯ ಹಾಗೂ ಯುಸುಫ್ ಪಠಾಣ್‌ಗೂ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: ಅಚ್ಚರಿಯಾದರೂ ನಿಜ- ದ್ರಾವಿಡ್-ಪೂಜಾರ ಇಬ್ಬರ ಅಂಕಿ ಅಂಶ ಒಂದೇ!

ಕಳೆದ ಸೆಪ್ಟೆಂಬರ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೆನ್ನು ನೋವಿಗೆ ತುತ್ತಾಗಿದ್ದರು. ಹೀಗಾಗಿ ಏಷ್ಯಾಕಪ್ ಟೂರ್ನಿಯಿಂದ ನಿರ್ಗಮಿಸಿದರು. ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಪಾಂಡ್ಯ ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ದದ ಸರಣಿಯಿಂದಲೂ ಹೊರಗುಳಿದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭ್ಯಾಸಕ್ಕಿಂತ ವಿಶ್ರಾಂತಿ ಬೇಕಿದೆ: ಕೋಚ್ ಶಾಸ್ತ್ರಿ!