Asianet Suvarna News Asianet Suvarna News

ಹಾಕಿ ವಿಶ್ವಕಪ್‌ಗೆ ರಹಮಾನ್‌, ಗುಲ್ಜಾರ್‌ ಗೀತೆ

ಗುಲ್ಜಾರ್‌, ‘ಜೈ ಹಿಂದ್‌ ಹಿಂದ್‌, ಜೈ ಇಂಡಿಯಾ’ ಎಂಬ ಹೆಸರಿನ ಹಾಡು ಬರೆದಿದ್ದು, ರಹಮಾನ್‌ ಸಂಗೀತ ಸಂಯೋಜಿಸಲಿದ್ದಾರೆ.

Gulzar A R Rahman to compose song for 2018 Mens Hockey World Cup
Author
Mumbai, First Published Sep 22, 2018, 11:26 AM IST

ಮುಂಬೈ[ಸೆ.22]: ಭಾರತದ ಸುಪ್ರಸಿದ್ಧ ಸಂಗೀತ ನಿರ್ದೇಶಕ, ನಿರ್ಮಾಪಕ, ಗಾಯಕ ಎ.ಆರ್‌.ರಹಮಾನ್‌ ಮತ್ತು ಸಂಗೀರ ರಚನೆಕಾರ ಗುಲ್ಜಾರ್‌, ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್‌ಗೆ ಟೈಟಲ್‌ ಗೀತೆ ರಚಿಸಿದ್ದಾರೆ. 

ಗುಲ್ಜಾರ್‌, ‘ಜೈ ಹಿಂದ್‌ ಹಿಂದ್‌, ಜೈ ಇಂಡಿಯಾ’ ಎಂಬ ಹೆಸರಿನ ಹಾಡು ಬರೆದಿದ್ದು, ರಹಮಾನ್‌ ಸಂಗೀತ ಸಂಯೋಜಿಸಲಿದ್ದಾರೆ. ‘ನಾನು ಮತ್ತು ಗುಲ್ಜಾರ್‌, ಹಾಕಿ ವಿಶ್ವಕಪ್‌ಗಾಗಿ ಹಾಡೊಂದನ್ನು ರಚಿಸಿದ್ದೇವೆ. ಈ ಹಾಡು ಎಲ್ಲರನ್ನು ಹುರಿದುಂಬಿಸಿ, ಸ್ಫೂರ್ತಿ ಹೆಚ್ಚಿಸಿ, ಎಲ್ಲರೂ ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತದೆ’ ಎಂದು ರಹಮಾನ್‌ ಹೇಳಿದ್ದಾರೆ. 

ಭುವನೇಶ್ವರದಲ್ಲಿ ನವೆಂಬರ್‌ 28ರಿಂದ ಡಿಸೆಂಬರ್‌ 15ರವರೆಗೆ ಪುರಷರ ಹಾಕಿ ವಿಶ್ವಕಪ್‌ ಟೂರ್ನಿ ನಡೆಯಲಿದೆ
 

Follow Us:
Download App:
  • android
  • ios