ದಿಲ್ಶಾನ್ ಸ್ಫೋಟ, ಚಿನ್ನಸ್ವಾಮಿಯಲ್ಲಿ ಹಬ್ಬಕ್ಕೂ ಮುನ್ನವೇ ‘ಗಣೇಶ‘ ಚತುರ್ಥಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 10:44 PM IST
Goldan Star Ganesh Wodeyar Chargers Champion of karnataka-chalanchitra-cup-2018
Highlights

ಸ್ಯಾಂಡಲ್‌ವುಡ್ ಸ್ಟಾರ್ , ಕರ್ನಾಟಕ ರಣಜಿ ಆಟಗಾರರು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಮಾಗಮದ ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿಇದೀಗ ಅಂತಿಮ ಘಟ್ಟ ಮುಗಿಸಿದೆ. ರಾಜಾಹುಲಿ ಯಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ತಂಡಗಳು ಫೈನಲ್ ನಲ್ಲಿ ಸೆಣೆಸಾಟ ನಡೆಸಿದ್ದು ಅಂತಿಮವಾಗಿ ಗಣೇಶ್ ನೇತೃತ್ವದ ಒಡೆಯರ್ಸ್ ತಂಡ ಸ್ಯಾಂಡಲ್ ವುಡ್ ಕಪ್ ಗೆ  ಮುತ್ತಿಟ್ಟಿದೆ.

ಬೆಂಗಳೂರು(ಸೆ.09):  ಸಂಜೆ ಶುರುವಾದ ಪಂದ್ಯ ಆರಂಭದಿಂದಲೂ ರೋಚಕತೆಯಿಂದ ಕೂಡಿತ್ತು. ಮೊದಲು ಬ್ಯಾಟ್ ಮಾಡಿದ  ಯಶ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಓವೆಲ್ ಶಾ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ನಿಗದಿತ 10 ಓವರ್ ನಲ್ಲಿ 122 ರನ್ ಕಲೆಹಾಕಿತ್ತು.

ಚೇಸಿಂಗ್‌ ಗೆ ಇಳಿದ ಒಡೆಯರ್ಸ್ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ನೆರವಾಗಿ ನಿಂತರು. ಬೌಲಿಂಗ್ ನಲ್ಲಿಯೂ ಮಿಂಚಿ ಒಂದೇ ಓವರ್ ನಲ್ಲಿ ಮೂರು ವಿಕೆಟ್ ಕಿತ್ತಿದ್ದ ದಿಲ್ಶಾನ್ ಬ್ಯಾಟಿಂಗ್‌ ನಲ್ಲಿ ಅಬ್ಬರಿಸಿದರು.  ಆದರೆ ಅಂತಿಮ ಓವರ್ ನಲ್ಲಿ 31 ಬಾಲ್‌ ಗೆ 68 ರನ್ ಬಾರಿಸಿದ್ದ ದಿಲ್ಶಾನ್ ರನೌಟ್ ಆಗಿ ಹೊರನಡೆದರು. ರೋಚಕ ಅಂತಿಮ ಓವರ್  ಅಂತಿಮ ಬಾಲ್ ನಲ್ಲಿ ರಿತೇಶ್ ಭಟ್ಕಳ್ ಸಿಕ್ಸರ್ ಸಿಡಿಸಿ ಒಡೆಯರ್ಸ್ ಗೆ ಗೆಲುವು ತಂದುಕೊಟ್ಟರು.

 

loader