ದೆಹಲಿ(ಆ.12): ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭಾರಿ ಹಿನ್ನಡೆ ಅನುಭವಿಸಿದೆ. ಭಾರತವನ್ನ 107 ರನ್‌ಗೆ ಆಲೌಟ್ ಮಾಡಿದ ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಮೇಲುಗೈ ಸಾಧಿಸಿದೆ.  ಗೆಲುವಿನ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾ ಲೆಕ್ಕಾಚಾರಗಳು ಹಲವೆಡೆ ಉಲ್ಟಾ ಹೊಡೆದಿದೆ.

ಲಾರ್ಡ್ಸ್ ಟೆಸ್ಟ್ ಪಂದ್ಯದ ಹಿನ್ನಡೆಗೆ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಕೆಲ ಕಾರಣಗಳನ್ನ ಹೇಳಿದ್ದಾರೆ. ಅದರಲ್ಲೂ 3ನೇ ವೇಗಿ ಕೊರತೆಯಿಂದಲೇ ಆಂಗ್ಲರು ಬ್ಯಾಟಿಂಗ್‌ನಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದಿದ್ದಾರೆ.

ಲಾರ್ಡ್ಸ್ ಪಿಚ್‌ ಕಂಡೀಷನ್ ವೇಗಿಗಳಿಗೆ ಸಹಕರಿಸುತ್ತಿದ್ದರೂ ನಾಯಕ ವಿರಾಟ್ ಕೊಹ್ಲಿ, ಉಮೇಶ್ ಯಾದವ್ ಬದಲು ಕುಲದೀಪ್ ಯಾದವ್‌ಗೆ ಅವಕಾಶ ನೀಡಿದ್ದಾರೆ. ಇದು ಮೊದಲ ತಪ್ಪು ನಿರ್ಧಾರ ಎಂದಿದ್ದಾರೆ. ಆರ್ ಅಶ್ವಿನ್ ಹಾಗೂ  ಕುಲ್ದೀಪ್ ಯಾದವ್ ಲಾರ್ಡ್ಸ್‌ನಲ್ಲಿ ಮಿಂಚಿಲಿಲ್ಲ. 

ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದಾರೆ. ಆದರೆ 3ನೇ ವೇಗಿಯಾಗಿ ಹಾರ್ದಿಕ್ ಪಾಂಡ್ಯ ಪರಿಣಾಮಕಾರಿಯಾಗಿಲ್ಲ.  ಉಮೇಶ್ ಯಾದವ್ ಸೂಕ್ತವಾಗಿದ್ದರು. ಆದರೆ ತಂಡದ ಬದಲಾವಣೆ ಲಾರ್ಡ್ಸ್ ಕಂಡೀಷನ್‌ಗೆ ಸೂಕ್ತವಾಗಿಲ್ಲ ಎಂದು ಗಂಭೀರ್ ಹೇಳಿದ್ದಾರೆ.