ಕೋಲ್ಕತಾ[ಅ.06]: ಅರ್ಜೆಂಟೀನಾದ ಖ್ಯಾತ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಉಡುಗೊರೆಯಾಗಿ ವಿಶೇಷವಾಗಿ ಸಿದ್ಧಪಡಿಸಿರುವ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ನ ಜೆರ್ಸಿಯೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಜೆರ್ಸಿ ಹಿಂಭಾಗದಲ್ಲಿ ‘ದೀದಿ ನಂ.10’ ಎಂದು ಬರೆಯಲಾಗಿದೆ. 

‘ಸ್ನೇಹಿತರಾದ ದೀದಿ ಅವರಿಗೆ ಮೆಸ್ಸಿ ಕಡೆಯಿಂದ ಅಭಿನಂದನೆಗಳು’ ಎಂದು ಸಂದೇಶವನ್ನು ಸಹ ಮೆಸ್ಸಿ ಇದೇ ವೇಳೆ ರವಾನಿಸಿದ್ದಾರೆ. ಕಳೆದ ವರ್ಷ ಭಾರತದಲ್ಲಿ ನಡೆದ ಅಂಡರ್-17 ಫುಟ್ಬಾಲ್ ವಿಶ್ವಕಪ್‌ಗೆ ಯಶಸ್ವಿ ಆತಿಥ್ಯ ವಹಿಸಿದ ಕಾರಣ ಮೆಸ್ಸಿ ಈ ಉಡುಗೊರೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಪ್ರಸ್ತುತ ಕೋಲ್ಕತಾದ ಫುಟ್ಬಾಲ್ ನೆಕ್ಸ್ಟ್ ಎನ್ನುವ ಸಂಸ್ಥೆಗೆ ಈ ಜೆರ್ಸಿ ತಲುಪಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಜೆರ್ಸಿ ಹಸ್ತಾಂತರಿಸಲು ಸಮಯ ಕೋರಿದೆ.