Asianet Suvarna News Asianet Suvarna News

ಜಿಂಬಾಬ್ವೆ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಯ್ಕೆ

ಮುಂಬರುವ ವಿಶ್ವಕಪ್ ಟೂರ್ನಿ ದೃಷ್ಠಿಯಲ್ಲಿಟ್ಟುಕೊಂಡು ಜಿಂಬಾಬ್ವೆ ತಂಡಕ್ಕೆ ಕೋಚ್ ಆಯ್ಕೆ ಮಾಡಲಾಗಿದೆ. ಕೋಚ್ ಆಯ್ಕೆಯಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿ, ಟೀಂ ಇಂಡಿಯಾ ಮಾಜಿ ನಾಯಕನಿಗೆ ಮಣೆ ಹಾಕಲಾಗಿದೆ.

Formenr Indian player appointed as head coach of the Zimbabwe mens team
Author
Bengaluru, First Published Aug 24, 2018, 4:48 PM IST

ನವದೆಹಲಿ(ಆ.24): ಜಿಂಜಾಬ್ವೆ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಲಾಲ್ ಚಂದ್ ರಜಪೂತ್ ಇದೀಗ ಜಿಂಬಾಬ್ವೆ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

 

 

ಕಳೆದ ಜೂನ್‌ನಿಂದ ಜಿಂಬಾಬ್ವೆ ತಂಡದ ಹಂಗಾಮಿ ಕೋಚ್ ಆಗಿ ಸೇವೆಸಲ್ಲಿಸುತ್ತಿದ್ದ ಲಾಲ್ ಚಂದ್ ರಜಪೂತ್ ಇದೀಗ ಪೂರ್ಣಾವಧಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗಾ ಜಿಂಬಾಬ್ವೆ ನಡುವಿನ ತ್ರಿಕೋನ ಸರಣಿಯಲ್ಲಿ ರಜಪೂತ್ ಹಂಗಾಮಿ ಕೋಚ್ ಆಗಿದ್ದರು.

ಅಫ್ಘಾನಿಸ್ತಾನ ತಂಡಕ್ಕೆ ಕೋಚ್ ಆಗಿ ಸೇವೆ ಸಲ್ಲಿಸಿರುವ ರಜಪೂತ್, ಟೀಂ ಇಂಡಿಯಾಗೂ ಮಾರ್ಗದರ್ಶನ ನೀಡಿದ್ದಾರೆ. ಆರಂಭಿಕರಾಗಿದ್ದ ರಜಪೂತ್  ಟೀಂ ಇಂಡಿಯಾ ಪರ 2 ಟೆಸ್ಟ್ ಹಾಗೂ 4 ಏಕದಿನ ಪಂದ್ಯ ಆಡಿದ್ದಾರೆ. ಇನ್ನು 110 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ.

Follow Us:
Download App:
  • android
  • ios