ಮ್ಯಾಡ್ರಿಡ್(ಜ.31): ಬ್ರೆಜಿಲ್ ಫುಟ್ಬಾಲ್ ಸ್ಟಾರ್ ನೇಯ್ಮಾರ್  ಇಂಜುರಿಗೆ ತುತ್ತಾಗಿದ್ದಾರೆ. ನೇಯ್ಮಾರ್‌ಗೆ ಕನಿಷ್ಠ 10 ವಾರಗಳ ವಿಶ್ರಾಂತಿ ಅಗತ್ಯವಿದೆ.  ಹೀಗಾಗಿ ಚಾಂಪಿಯನ್ಸ್ ಲೀಗ್ ಟೂರ್ನಿಯ ಲಾಸ್ಟ್ 16 ರೌಂಡ್‌ನಿಂದ ಹೊರಬಿದ್ದಿದ್ದಾರೆ. ಸದ್ಯ ಶಸ್ತ್ರ ಚಿಕಿತ್ಸೆಯಿಂದ ದೂರ ಉಳಿದಿರುವ ನೇಯ್ಮಾರ್, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: 4ನೇ ಏಕದಿನ: ಭಾರತಕ್ಕೆ ತಿರುಗೇಟು ನೀಡಿದ ನ್ಯೂಜಿಲೆಂಡ್!

ಈ ಆವೃತ್ತಿಯಲ್ಲಿ ಪ್ಯಾರಿಸ್ ಸೈಂಟ್ ಜರ್ಮನ್ ತಂಡದ ಪರ ನೇಯ್ಮಾರ್ 23 ಪಂದ್ಯಗಳಿಂದ 20 ಗೋಲು ಸಿಡಿಸಿದ್ದಾರೆ. 2019ರ ಜೂನ್ ಹಾಗೂ ಜುಲೈನಲ್ಲಿ ಬ್ರೆಜಿಲ್ ಕೋಪಾ ಅಮೆರಿಕಾ ಫುಟ್ಬಾಲ್ ಟೂರ್ನಿ ಆಯೋಜಿಸುತ್ತಿದೆ. ನೇಯ್ಮಾರ್ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: ಐಎಸ್‌ಎಲ್‌: ಅಗ್ರ ಸ್ಥಾನಕ್ಕೇರಿದ ಬೆಂಗಳೂರು ಎಫ್‌ಸಿ

2018ರ ಫೆಬ್ರವರಿಯಲ್ಲಿ ನೇಯ್ಮಾರ್ ಇದೇ ರೀತಿ ಇಂಜುರಿಗೆ ತುತ್ತಾಗಿದ್ದರು. ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿದ ನೇಯ್ಮಾರ್ ರಷ್ಯಾದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆದರೆ ನೇಯ್ಮಾರ್‌ ಗಾಯ ಮತ್ತೆ ಉಲ್ಬಣಗೊಂಡಿತ್ತು.