Asianet Suvarna News Asianet Suvarna News

ಏಷ್ಯನ್ ಗೇಮ್ಸ್‌ 2018: ಕಬಡ್ಡಿಯಲ್ಲಿ ಕಳಚಿತು ಭಾರತದ ಚಾಂಪಿಯನ್ ಪಟ್ಟ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪ್ರತಿ ಬಾರಿ ಚಿನ್ನದ ಪದಕ ಗೆಲ್ಲುತ್ತಿದ್ದ ಭಾರತದ ಪುರುಷರ ಕಬಡ್ಡಿ ತಂಡ ಈ ಬಾರಿ ಮಾತ್ರ ಮುಗ್ಗರಿಸಿದೆ. ಅಷ್ಟಕ್ಕೂ 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕಬಡ್ಡಿ ತಂಡ ಪಡೆದ ಪದಕ ಯಾವುದು?ಇಲ್ಲಿದೆ.

First time india mens kabaddi team missed gold medal in Asian games
Author
Bengaluru, First Published Aug 23, 2018, 7:31 PM IST

ಜಕರ್ತಾ(ಆ.23): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಭಾರತದ ಕಬಡ್ಡಿ ತಂಡ ಫೈನಲ್ ತಲಪದೆ ನಿರಾಸೆ ಅನುಭವಿಸಿದೆ. ಏಷ್ಯನ್ ಗೇಮ್ಸ್ ಕ್ರೀಡಾಕೂಡದಲ್ಲಿ 7 ಬಾರಿ ಚಾಂಪಿಯನ್ ಆಗಿರುವ ಭಾರತದ ಪುರುಷರ ಕಬಡ್ಡಿ ತಂಡ ಇದೀಗ ಇರಾನ್ ವಿರುದ್ಧ ಸೋಲು ಅನುಭವಿಸಿದೆ.

 

 

ಸೆಮಿಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ 18-27 ಅಂತರದಲ್ಲಿ ಸೋಲು ಅನುಭವಿಸಿದೆ. ಇದೀಗ ಪುರುಷರ ತಂಡ ಕಂಚಿನ ಪದಕ್ಕೆ ಹೋರಾಟ ನಡೆಸಬೇಕಿದೆ.  ಈ ಮೂಲಕ ಏಷ್ಯನ್ ಗೇಮ್ಸ್‌ಕ್ರೀಡಾಕೂಟದಲ್ಲಿ ಭಾರತದ ಕಬಡ್ಡಿ ಪಾಬಲ್ಯ ಅಂತ್ಯಗೊಂಡಿದೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಸತತ 7 ಚಿನ್ನದ ಪದಕ ಗೆಲ್ಲೋ ಮೂಲಕ ಸೋಲಿಲ್ಲದ ಸರದಾರನಾಗಿ ಮೆರದಾಡಿತ್ತು. ಆದರೆ ಇರಾನ್ ವಿರುದ್ಧ ಸೋಲು ಅನುಭವಿಸೋ ಮೂಲಕ ಭಾರತದ ಚಿನ್ನದ ಕನಸು ನುಚ್ಚುನೂರಾಗಿದೆ.

Follow Us:
Download App:
  • android
  • ios